ಕೇಂದ್ರದಿಂದ ಲಾಕ್ ಡೌನ್ 2.0 ಮಾರ್ಗಸೂಚಿ ಬಿಡುಗಡೆ; ಏನಿರುತ್ತೆ, ಏನಿರಲ್ಲ?
ದೇಶದಲ್ಲಿ ಮೊದಲ ಹಂತದ ಲಾಕ್ ಡೌನ್ ಹೊರತಾಗಿಯೂ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ. ಅಲ್ಲಿಯವರೆಗೆ ಲಾಕ್ಡೌನ್ ಹೇಗಿರಲಿದೆ ಎಂಬ ಬಗ್ಗೆ ಇಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಿಮಾನಯಾನ, ರೈಲು, ರಸ್ತೆ ಪ್ರಯಾಣಗಳು ಬಂದ್ ಇರಲಿವೆ. ಹಾಗೇ ಶಿಕ್ಷಣ, ತರಬೇತಿ ಸಂಸ್ಥೆಗಳು ಪ್ರಾರಂಭವಾಗುವುದಿಲ್ಲ. ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಹಾಸ್ಪಿಟಾಲಿಟಿ ಸರ್ವೀಸ್ (ಹೋಟೆಲ್‌ಗಳು, ಕ್ಯಾಟರಿಂಗ್, ರೆಸ್ಟೋರೆಂಟ್, ಲಾಡ್ಜಿಂಗ್ಗಳು), ಸಿನಿಮಾ ಥಿಯೇಟರ್ಗಳು, ಶಾಪಿಂಗ್ ಮಾಲ್ಗಳು ತೆರೆಯುವುದಿಲ್ಲ.
ಹಾಗೇ ಸಾಮಾಜಿಕ, ರಾಜಕೀಯ ಮತ್ತು ಗುಂಪುಗೂಡಬಹುದಾದ ವೈಯಕ್ತಿಯ ಸಮಾರಂಭಗಳನ್ನು ನಡೆಸುವಂತಿಲ್ಲ. ಧಾರ್ಮಿಕ ಕೇಂದ್ರಗಳು, ಪುಣ್ಯಕ್ಷೇತ್ರಗಳು ಬಂದ್ ಇರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ಮಾಡುವುದಕ್ಕೆ ಅವಕಾಶ ಇಲ್ಲ. ಧಾರ್ಮಿಕ ಸಭೆ, ಸಮಾವೇಶ, ಬೋಧನಾ ಕಾರ್ಯಕ್ರಮಗಳನ್ನೂ ಆಯೋಜಿಸುವಂತಿಲ್ಲ.
ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು, ಆತಿಥ್ಯ ಸೇವೆಗಳು, ಸಿನೆಮಾ ಹಾಲ್‌ಗಳು ಮತ್ತು ಶಾಪಿಂಗ್ ಸಂಕೀರ್ಣಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತವೆ. ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸುವ ಹೋಟೆಲ್‌ಗಳು, ಹೋಂ ಸ್ಟೇಗಳು, ವಸತಿಗೃಹಗಳು ಮತ್ತು ಹೋಟೆಲ್‌ಗಳು ಮತ್ತು ಲಾಕ್‌ಡೌನ್, ವೈದ್ಯಕೀಯ ಮತ್ತು ತುರ್ತು ಸಿಬ್ಬಂದಿ, ಗಾಳಿ ಮತ್ತು ಸಮುದ್ರ ಸಿಬ್ಬಂದಿ ಸೇವೆ ಸ್ಥಗಿತ
ಅಡಿಗೆ ಅನಿಲ ಪೂರೈಕೆ, ನೀರು ಸರಬರಾಜು ಹಾಗೂ ಶುಚಿ ಕೆಲಸದಲ್ಲಿ ತೊಡಗಿರುವವರಿಗೆ ಯಾವುದೇ ಅಡ್ಡಿ ಇಲ್ಲ. IT ಉದ್ಯಮದಲ್ಲಿ ಕಂಪನಿಗಳು ಶೇ.50 ರಷ್ಟು ಉದ್ಯೋಗಿಗಳ ಜೊತೆಗೆ ಕಚೇರಿಯಲ್ಲಿ ಕೆಲಸ ಮಾಡಲು ಅನುಮತಿ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಕಾರ್ಯ ಮುಂದುವರಿಕೆ. ಎಫ್. ಸಂಬಂಧಿತ ಯಂತ್ರಗಳ ಕೊಯ್ಲು ಮತ್ತು ಬಿತ್ತನೆಯ ಒಳ ಮತ್ತು ಅಂತರ ರಾಜ್ಯ ಚಲನೆ ಸಂಯೋಜಿತ ಹಾರ್ವೆಸ್ಟರ್ ಮತ್ತು ಇತರ ಕೃಷಿ / ತೋಟಗಾರಿಕೆ ಉಪಕರಣಗಳಂತೆ. ಗ್ರಾಮ ಪಂಚಾಯತಿ ಮಟ್ಟದ ಸರ್ಕಾರಿ ಕಚೇರಿಗಳನ್ನು ತೆರೆಯಲಾಗುವುದು. ರಸ್ತೆ, ನೀರಾವರಿ, ಕಟ್ಟಡ ಸೇರಿದಂತೆ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಹಸಿರು ನಿಶಾನೆ. ಆರೋಗ್ಯ ಸೇವೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನ ಓಡಾಡಕ್ಕೆ ಅವಕಾಶ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ ತೆರೆಯಲಿವೆ. ರಾಜ್ಯ ಸರ್ಕಾರದ ಪೊಲೀಸ್ ಇಲಾಕೆ, ಗೃಹ ರಕ್ಷಕ ದಳ, ಜಿಲ್ಲಾಡಳಿತ, ಖಜಾನೆ ಇಲಾಖೆಗಳ ಸೇವೆ ಮುಂದುವರಿಕೆ.
Comments