ಬೆಂಗಳೂರಿನ 38 ವಾರ್ಡ್ಗಳು ಕೊರೊನಾ ಹಾಟ್ಸ್ಪಾಟ್ ಎಂದು ಘೋಷಣೆ

15 Apr 2020 10:11 AM | General
360 Report

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಸ್ತ್ರ ರೂಪಿಸಿರುವ ಬಿಬಿಎಂಪಿ ಬ್ಲೂಪ್ರಿಂಟ್ ಸಿದ್ದಪಡಿಸಿದ್ದು ಬೆಂಗಳೂರಿನ 6 ವಲಯಗಳಲ್ಲಿ 38 ವಾರ್ಡ್ಗಳನ್ನು ಕೊರೊನಾ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಹೇಳಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ 3 ಕಿ.ಮೀ ಪ್ರದೇಶವನ್ನು ಬಫರ್ ಜೋನ್ ಎಂದು ಗುತಿಸಲಾಗಿದೆ. ಸೋಂಕು ಪ್ರಕರಣ ದಾಖಲಾದ ಪ್ರದೇಶಗಳನ್ನು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳ ಆಧಾರದಲ್ಲಿ  ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು ಈ 38 ವಾರ್ಡ್ ಗಳಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣಗೊಳ್ಳಲಿದೆ. ಜನತೆ ಅಗತ್ಯ ವಸ್ತುಗಳ ಖರೀದಿಗೂ ಮನೆಗಳಿಂದ ಹೊರಬರದಂತೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಥಣಿಸಂದ್ರ, ಬ್ಯಾಟರಾಯನಪುರ, ಜೆಪಿನಗರ, ರಾಧಾಕೃಷ್ಣ ದೇವಸ್ಥಾನ, ಹೊರಮಾವು, ಅರಮನೆ ನಗರ, ಹೂಡಿ, ಮಾರುತಿಸೇವಾ ನಗರ, ರಾಮಮೂರ್ತಿನಗರ, ಹೊಸಹಳ್ಳಿ,  ಕರಿಸಂದ್ರ, ವಸಂತನಗರ, ಗಂಗಾನಗರ, ನಾಗರಬಾವಿ, ಆಜಾದ್ ನಗರ, ಬಾಪೂಜಿನಗರ, ಗಿರಿನಗರ, ಸಿವಿರಾಮನ್‌ನಗರ, ಮಡಿವಾಳ, ಗುರಪ್ಪನಪಾಳ್ಯ, ನಾಗಾಪುರ, ಹಗದೂರು, ಸುಧಾಮನಗರ, ವರ್ತೂರು, ಸಿಂಗಸಂದ್ರ ಗರುಡಾಚಾರ್ ಪಾಳ್ಯ, ಅತ್ತಿಗುಪ್ಪೆ, ಜಗಜೀವನ್‌ರಾಮ್‌ನಗರ,  ಲಿಂಗರಾಜಪುರ, ರಾಮಸ್ವಾಮಿ ಪಾಳ್ಯ, ಸಂಪಗಿರಾಮ ನಗರ, ಆಡುಗೋಡಿ, ಸುದ್ದುಗುಂಟೆಪಾಳ್ಯ, ಶಾಕಾಂಬರಿನಗರ, ಶಿವನಗರ, ಜಗಜೀವನ್‍ರಾಮ್ ನಗರ, ಸುಭಾಷ್ ನಗರ, ಬೇಗೂರು.

Edited By

venki swamy

Reported By

venki swamy

Comments