ಕೊರೊನಾ ತಡೆಯಲು ಜನತೆಗೆ ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳು

14 Apr 2020 11:52 AM | General
358 Report

ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸುವ ಅಗತ್ಯವಿದೆ. ಕೊರೊನಾ ಸೋಂಕು ಹರಡದಂತೆ ನಾವು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸರಿಯಾಗಿದೆ. ಇದನ್ನು ಮತ್ತೆ ಮೂರು ವಾರಗಳ ಕಾಲ ಲಾಕ್ಡೌನ್ ಸಮಯವನ್ನು ವಿಸ್ತರಣೆ ಮಾಡಿ ಅಧಿಕೃತವಾಗಿ ಘೋಷಿಸಿದ್ದಾರೆ.

ವಿಶ್ವ ಕಲ್ಯಾಣ, ಭಾರತ ಕಲ್ಯಾಣಕ್ಕೆ ಕೈಜೋಡಿಸಿ ಕೊರೋನಾ ವಿರುದ್ಧ ಗೆಲುವು ಸಾಧಿಸೋಣ. ವಯೋವೃದ್ಧರ ಮೇಲೆ ನಿಗಾ  ಇರಿಸಿ, ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚಿನ ಗಮನ ಇರಲಿ. ಲಾಕ್'ಡೌನ್ ಸಾಮಾಜಿಕ ಅಂತರ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಸಚಿವಾಲಯದ ಸೂಚನೆಗಳನ್ನು ಪಾಲನೆ ಮಾಡಿ. ಬಡವರು, ನಿರ್ಗತಿಕರ ಊಟ, ವಸತಿ ಬಗ್ಗೆ ನಿಗಾವಹಿಸಿ, ಎಲ್ಲರೂ ನೆರವಾಗಿ. ಯಾರನ್ನು ಕೆಲಸದಿಂದ ತೆಗೆಯಬೇಡಿ, ಕೃಷಿಕರ ಬೆಂಬಲಕ್ಕೆ ನಿಲ್ಲಿ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್ ಗೌರವಿಸಿ, ಸಹಕರಿಸಿ ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ ಬಳಸಿ  ಇತರರಿಗೂ ತಿಳಿಸಿ.

Edited By

venki swamy

Reported By

venki swamy

Comments