ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ರೈತರು

10 Apr 2020 7:22 PM | General
405 Report

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿ ವ್ಯಾಪಕವಾಗಿ ಹರಡುತ್ತಿರುವುದರಿಂದ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೆಶಾದ್ಯಂತ ಹಲವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದು ಗುಜರಾತ್ ರೈತರು ದೇಣಿಗೆ ನೀಡುವ ಮೂಲಕ ಎಲ್ಲರ ಗಮನಸೆಳೆದ್ದಿದರೆ.

ಅನೇಕ ರೈತರು ಕಿಸಾನ್ ನಿಧಿಯ 2000 ರೂ.ಗಳನ್ನು ಪಿಎಂ ಕೇರ್‌ಗೆ ದೇಣಿಗೆ ನೀಡಿದ್ದಾರೆ ಎಂದು ಅಮ್ರೆಲಿ ಜಿಲ್ಲೆಯ ದಿತ್ಲಾ ಗ್ರಾಮದ ರೈತರಾದ ಉಕಾಭಾಯ್ ಶೆಟ್ಟಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಲಭಿಸಿರುವ 2000 ರೂ.ಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 200ಕ್ಕೂ ಹೆಚ್ಚು ರೈತರು ದೇಣಿಯಾಗಿ ನೀಡುವ ಮೂಲಕ   ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನತೆ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.

Edited By

venki swamy

Reported By

venki swamy

Comments