ವಿಡಿಯೋ ಕಾಲ್‌ನಲ್ಲಿಯೇ ನಡೆಯಿತು ನಿಶ್ಚಿತಾರ್ಥ!
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮಗಳ ಹೆಸರಿಯಲ್ಲಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಅನೇಕ ಮದುವೆಗಳು ನಿಂತು ಹೋಗಿವೆ. ಮತ್ತೆ ಕೆಲವರು ನಿಗದಿತ ಮುಹೂರ್ತದಲ್ಲಿ ಪೋಷಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿಯ ಅನುಷಾ ಸಂಕೇಶ್ವರದಲ್ಲಿದ್ದು, ಮಹಾಂತೇಶ ಬಾಗಲಕೋಟೆಯಲ್ಲಿ ಇದ್ದರು. ಇಬ್ಬರು ವಿಡಿಯೋ ಕಾಲ್ ಮೂಲಕ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ನಿಶ್ಚಿತಾರ್ಥವನ್ನು ನೂರಾರು ಮಂದಿ ವೀಕ್ಷಿಸಿ ಶುಭ ಹಾರೈಸಿದ್ದಾರೆ.
Comments