ರಾಮನಗರದಲ್ಲಿ ಕೊರೋನಾ ತಡೆಗೆ ದ್ರಾವಣ ಸಿಂಪಡಣಾ ಟನಲ್ ಆರಂಭಿಸಿದ ಮಾಜಿ ಸಿಎಂ

05 Apr 2020 9:10 PM | General
783 Report

ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ  ಜನಜಂಗುಳಿ ಸೇರುವ ಸ್ಥಳಗಳಾದ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆಗಳಲ್ಲಿ   ಈಗಾಗಲೇ ನಾಲ್ಕು ಕಡೆ ಟನಲ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳನ್ನು ಕುಮಾರಸ್ವಾಮಿ ಅವರು ಸೋಮವಾರ ಉದ್ಘಾಟಿಸಲಿದ್ದು, ಎರಡು ಎಪಿಎಂಸಿ ಮಾರುಕಟ್ಟೆ, ಮತ್ತು  ಎರಡು ರೇಷ್ಮೆ ಮಾರುಕಟ್ಟೆ ಕೇಂದ್ರಗಳಿಗೆ ಬರುವ ಸಾರ್ವಜನಿಕರಿಗೆ ಟನಲ್ ಮೂಲಕ ದ್ರಾವಣ ಸಿಂಪಡಣೆ ಕಾರ್ಯ ನಡೆಯಲಿದೆ.

Edited By

venki swamy

Reported By

venki swamy

Comments