ದೇಶಾದ್ಯಂತ ಏಕತೆಯ ದೀಪ ಹಚ್ಚುವಾಗ ಲೈಟ್ ಫ್ಯಾನ್, ಫ್ರಿಜ್ ಅನ್ನು ಆಫ್ ಮಾಡಬಾರದು..!

04 Apr 2020 5:47 PM | General
496 Report

ಕೋವಿಡ್ 19 ಹರಡದಂತೆ ತಡೆಯಲು ಇದೇ ಭಾನುವಾರ ಏಪ್ರಿಲ್ 5ನೇ ತಾರೀಕು ರಾತ್ರಿ 9 ಗಂಟೆಗೆ 9 ನಿಮಿಷ ದೀಪಗಳನ್ನು ಆಫ್ ಮಾಡಿ, ಎಣ್ಣೆದೀಪಗಳನ್ನು, ಮೊಂಬತ್ತಿಗಳು, ಮೊಬೈಲ್ಫೋನ್ನ ಫ್ಲ್ಯಾಶ್ಲೈಟ್ಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. . ಆದರೀಗ, ಪ್ರಧಾನಿ ಕರೆಯಂತೆ ಒಮ್ಮೆಲೇ ದೇಶಾದ್ಯಂತ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ಗಳು ಹಾಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದ್ದರಿಂದ, ದೀಪಗಳನ್ನು ಮಾತ್ರ ಆರಿಸಿ, ಫ್ರಿಜ್, ಟಿವಿ, ಕಂಪ್ಯೂಟರ್, ಫ್ಯಾನ್ಗಳನ್ನು ಎಂದಿನಂತೆ ಉರಿಸಬೇಕು ಎಂದು ವಿದ್ಯುತ್ ನಿಗಮಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿವೆ.

ವಿದ್ಯುತ್​ ಸರಬರಾಜಿನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಟಿವಿ, ಫ್ರಿಜ್​, ಎಸಿ, ಫ್ಯಾನ್​, ಟಿವಿ, ಕಂಪ್ಯೂಟರ್​ ಮತ್ತಿತರ ವಿದ್ಯುತ್​ ಸಾಧನಗಳ ಬಳಕೆಯನ್ನು ಎಂದಿನಂತೆ ಮುಂದುವರಿಸಬೇಕು. ಹಾಗೂ ದೀಪಗಳನ್ನು ಮಾತ್ರ ಆರಿಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ವಕ್ತಾರರು ಸಲಹೆ ನೀಡಿದ್ದಾರೆ.

Edited By

venki swamy

Reported By

venki swamy

Comments