ದೇಶದ ಜನತೆಗೆ ಏಪ್ರಿಲ್ 5, ರಾತ್ರಿ 9ಕ್ಕೆ ಒಂಬತ್ತು ನಿಮಿಷ ದೀಪ ಬೆಳಗಲು ಪ್ರಧಾನಿ ಮೋದಿ ಕರೆ
ದೇಶದ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. 11 ನಿಮಿಷ 30 ಸೆಕೆಂಡ್ಗಳ ವಿಡಿಯೊದಲ್ಲಿ 'ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ' ಎಂಬ ಸಂದೇಶ ನೀಡಿದ್ದಾರೆ.
ದೇಶದಲ್ಲಿ ಲಾಕ್‌ಡೌನ್ ಘೋಷಿಸಿ 9 ದಿನಗಳಾಗಿವೆ. ನೀವೆಲ್ಲಾ ಸಹಕರಿಸಿದ ರೀತಿ ಅಭೂತಪೂರ್ವವಾಗಿದೆ. ಈ ಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದೀರಿ. ಈ ಸಂಕಷ್ಟವನ್ನು ದೇಶದ ಜನತೆ ಒಟ್ಟಾಗಿ ಎದುರಿಸೋಣ. ನಿಮ್ಮ ಮನೆಯ ಎಲ್ಲಾ ಲೈಟ್ ಆರಿಸಿ, ಮನೆಯ ಬಾಲ್ಕನಿ, ಇಲ್ಲವೇ ಬಾಗಿಲಲ್ಲಿ ನಿಂತು ಮೊಂಬತ್ತಿ, ಮೊಬೈಲ್ ಪ್ಲಾಸ್ ಲೈಟ್, ದೀಪ ಹಚ್ಚಿ ಎಂದು ಮೋದಿ ಹೇಳಿದ್ದಾರೆ. ನಾವು ಒಂಟಿಯಲ್ಲ ಎನ್ನುವ ಸಂದೇಶ ರವಾನಿಸೋಣ. ಆದರೆ ಇದೇ ವೇಳೆ ಸಾಮಾಜಿಕ ಅಂತರದ ನಮ್ಮ ಲಕ್ಷ್ಮಣ ರೇಖೆಯನ್ನು ದಾಟದಿರೋಣ ಎನ್ನುವ ಎಚ್ಚರಿಯನ್ನು ಈ ಸಂದೇಶದ ಜತೆ ರವಾನಿಸಿದ್ದಾರೆ.
Comments