ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ

ಕಳೆದ ಹಲವು ದಿನಗಳಿಂದ ಕಚ್ಚಾ ತೈಲ ಬೆಲೆ ತೀವ್ರ ಕುಸಿತ ಕಾಣುತ್ತಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರ 2 ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಆದರೆ ರಾಜ್ಯ ಬಜೆಟ್ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.30ರಿಂದ ಶೇ.33ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.21ರಿಂದ ಶೇ.24ಕ್ಕೆ ಏರಿಸಿದ್ದರು.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 73.55 ರೂ. ಇದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 69.59 ರೂ. ಇದೆ., ಚೆನ್ನೈನಲ್ಲಿ 72.28 ರೂ. ಕೋಲ್ಕತದಲ್ಲಿ 72.29 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 75.30 ರೂ. ಇದೆ. ಇನ್ನು ಬೆಂಗಳೂರಿನಲ್ಲಿ ಒಂದು ಲೀಟರ್ ಡೀಸೆಲ್ ದರ 65.96 ರೂ. ಇದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 62.29 ರೂ., ಚೆನ್ನೈನಲ್ಲಿ 65.71 ರೂ., ಕೋಲ್ಕತದಲ್ಲಿ 64.62 ರೂ., ಹಾಗೂ ಮುಂಬಯಿನಲ್ಲಿ 65.21 ರೂ. ಇದೆ.
Comments