ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ ನಡೆದ ಕಾನ್ಸ್ ಟೇಬಲ್!

30 Mar 2020 6:52 PM | General
388 Report

ಕೊರೋನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಮಧ್ಯಪ್ರದೇಶದ ಪೋಲಿಸ್ ಕಾನ್ಸ್ ಟೇಬಲ್ ಹಿರಿಯ ಅಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಿಂದ 450 ಕಿಲೋ ಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ರಾಜ್ ಗಢ್ ಗೆ ನಡೆದು ಕರ್ತವ್ಯಕ್ಕೆ ಹಾಜರಾಗಿರುವ ವಿಚಾರ ಸಾಕಷ್ಟು ವೈರಲ್ ಆಗಿದೆ.

22 ವರ್ಷದ ದಿಗ್ವಿಜಯ್ ಶರ್ಮಾ ಎಂಬ ಪೊಲೀಸ್ ಕಾನ್ಸ್ ಟೇಬಲ್  ರಜೆಯ ಮೇಲೆ ಉತ್ತರಪ್ರದೇಶದಲ್ಲಿರುವ ಮನೆಗೆ ತೆರಳಿದ್ದರು ಲಾಕ್​ಡೌನ್ ಆದೇಶ ಬರುತ್ತಿದ್ದಂತೆ ಅವರು ಕರ್ತವ್ಯಕ್ಕೆ ಹಾಜರಾಗಲು ಮುಂದಾದರು. ರಾಜಗಢ ಪೊಲೀಸ್​ ಠಾಣೆಗೆ ಕರೆ ಮಾಡಿ ಊರಿನಿಂದ ವಾಪಾಸು ಬರುತ್ತಿರುವುದಾಗಿ ದಿಗ್ವಿಜಯ್​ ಹಿರಿಯ ಅಧಿಕಾರಿಗೆ ತಿಳಿಸಿದ್ದರು. 'ಬಸ್ ಮತ್ತು ರೈಲಿನ​ ವ್ಯವಸ್ಥೆ ಸಂಪೂರ್ಣ ಬಂದ್​ ಆಗಿದೆ. ಹೀಗಾಗಿ ಸದ್ಯ ಕರ್ತವ್ಯಕ್ಕೆ ಹಾಜರಾಗುವುದು ಬೇಡ,' ಎಂದು ಹಿರಿಯ ಅಧಿಕಾರಿಗಳು ದಿಗ್ವಿಜಯ್​ಗೆ ಸೂಚಿಸಿದ್ದರು. ಆದರೆ, ದಿಗ್ವಿಜಯ್​ ಮನಸ್ಸು ಮಾತ್ರ ಕರ್ತವ್ಯಕ್ಕೆ ಹಾಜರಾಗಲು ತುಡಿಯುತ್ತಿತ್ತು. ಹೀಗಾಗಿ, ಅವರು ನಡೆದು ಸಾಗಲು ಮುಂದಾದರು.  ಮಾರ್ಚ್ 25ರಂದು ಇಟಾವ ನಗರದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದು, ಕೆಲವೆಡೆ ಮೋಟಾರ್ ಬೈಕ್ ನಲ್ಲಿ ಮಧ್ಯ ಡ್ರಾಪ್ ಕೊಟ್ಟಿದ್ದರು. ಶನಿವಾರ ಮಧ್ಯಪ್ರದೇಶದ ರಾಜ್ ಗಢ್ ತಲುಪಿರುವುದಾಗಿ ತಿಳಿಸಿದ್ದಾರೆ.

Edited By

venki swamy

Reported By

venki swamy

Comments