ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಯಾರು ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

29 Mar 2020 1:09 PM | General
497 Report

ಕೊರೊನಾ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಭಾನುವಾರ ಕಟ್ಟೆಚ್ಚರ ವಹಿಸಲಾಗಿದೆ. 8ಕ್ಕೆ ಏರಿದೆ. ಕೊರೊನಾ 3ನೇ ಸೋಂಕಿತನಿಂದ ಇತರೆ 5 ಮಂದಿಗೆ ಸೊಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಒಂದೇ ದಿನ 5 ಕೊರೊನಾ ಸೋಂಕು ಪತ್ತೆಯಗಿದದ್ದು  ಈ 5 ಮಂದಿಯು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳು. ಹಾಗೂ 950 ಮಂದಿಯನ್ನು ಮನೆಯಲ್ಲಿಯೆ ನಿಗಾ ವಹಿಸಲು ಹೇಳಿರುವುದರಿಂದ ಇಡೀ‌ ಪಟ್ಟಣ ಸ್ತಬ್ದಗೊಂಡಿದೆ.

 ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಅಗತ್ಯ ಸಾಮಗ್ರಿ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೆಲವೆಡೆ ಹಾಲಿನ ಅಂಗಡಿಗಳನ್ನು ತೆರೆಯಲೂ ವರ್ತಕರು ಹಿಂದೇಟು ಹಾಕಿದ್ದಾರೆ. ತಹಶೀಲ್ದಾರ್ ಅವರು ಸಭೆ ಕರೆದಿದ್ದು,ಇನ್ನಷ್ಟು ಬಿಗಿಕ್ರಮಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.

Edited By

venki swamy

Reported By

venki swamy

Comments