ಸಾಕು ಮಗಳನ್ನ ಹಿಂದೂ ಯುವಕನೊಂದಿಗೆ ಮದ್ವೆ ಮಾಡಿದ ಮುಸ್ಲಿಂ ದಂಪತಿ

ಕೇರಳದ ಮುಸ್ಲಿಂ ದಂಪತಿಗಳು ತಮ್ಮ ಹಿಂದೂ ಸಾಕು ಮಗಳ ವಿವಾಹವನ್ನು ಕೇರಳದ ಭಾಗವತಿ ದೇವಸ್ಥಾನದಲ್ಲಿ ನಡೆಸಿಕೊಟ್ಟಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಅಬ್ದುಲ್ಲಾ ಮತ್ತು ಖದೀಜಾ ಮುಸ್ಲಿಂ ದಂಪತಿ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹವಾಗಿದೆ.
ಈ ಅಪರೂಪದ ಮದುವೆಗೆ ಹಿಂದೂ ಮತ್ತು ಮುಸ್ಲಿಂ ಕುಟುಂಬದವರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ವಧು ರಾಜೇಶ್ವರಿ ತಂದೆ, ಅಬ್ದುಲ್ಲಾ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದರು. ಆಕೆಯ ತಾಯಿಯೂ ಕೂಡ ರಾಜೇಶ್ವರಿ ಮಗುವಾಗಿದ್ದಾಗ ಸಾವನ್ನಪ್ಪಿದ್ದರು. ಕೊನೆಗೆ ರಾಜೇಶ್ವರಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಅಬ್ದುಲ್ಲಾ ಮತ್ತು ಖದೀಜಾ ರಾಜೇಶ್ವರಿಯನ್ನು ದತ್ತು ಪಡೆದು ಚೆನ್ನಾಗಿ ಸಾಕಿ, ಶಿಕ್ಷಣವನ್ನೂ ಕೊಡಿಸಿದ್ದರು. ಕೊನೆಗೆ ಆಕೆಯ ಇಷ್ಟದಂತೆ ತಮ್ಮ ಸಾಕು ಮಗಳು ರಾಜೇಶ್ವರಿಗೆ ಹಿಂದೂ ಹುಡುಗನ ಜೊತೆ ವಿವಾಹ ಮಾಡಿದ್ದಾರೆ. ಕೇರಳದ ಭಾಗವತಿ ದೇವಸ್ಥಾನದಲ್ಲಿ ಭಾನುವಾರ ಈ ವಿವಾಹ ಸಮಾರಂಭ ನಡೆದಿದೆ. ಮುಸ್ಲಿಂ ದಂಪತಿಯ ಮಗಳು ರಾಜೇಶ್ವರಿ ಹಿಂದೂ ಸಂಪ್ರದಾಯದಂತೆ ವಿಷ್ಣು ಪ್ರಸಾದ ಹಿಂದೂ ಹುಡುಗನ ಜೊತೆ ವಿವಾಹ ಕೂಡ ಮಾಡಿಸಿದ್ದಾರೆ.
Comments