ಕೊರೊನಾ ವೈರಸ್ ರಹಸ್ಯದ ಜೊತೆಗೆ ಮದ್ದನ್ನು ಸೂಚಿಸಿದ ವಿನಯ್ ಗುರೂಜಿ; ಔಷಧ ಏನು ಗೊತ್ತೇ?

13 Feb 2020 5:15 PM | General
612 Report

ಹಾಸನದ ಮಲ್ಲಪ್ಪನಹಳ್ಳಿಯ ಮಲ್ಲಿಕಾರ್ಜುನ ದೇವಾಲಯದ ಶಂಕುಸ್ಥಾಪನೆ ವೇಳೆ ಮಾತನಾಡಿದ ವಿನಯ್ ಗುರೂಜಿ, ಆರು ಸಾವಿರ ವರ್ಷಗಳ ಇತಿಹಾಸವಿರುವ ತಾಳೆ ಗರಿಯಲ್ಲಿ, ಏನು ಬರೆದಿದೆ ಈಗ ಅದೇ ಆಗುತ್ತಿದೆ. ಈ ವಿಷದ ಗಾಳಿಯಿಂದಾಗಿ ಈಶಾನ್ಯ ಭಾರತದಲ್ಲಿ ಮೃತ್ಯು ಸಂಭವಿಸುತ್ತದೆ ಎಂದು ಆ ಗ್ರಂಥದಲ್ಲಿ ಬರೆಯಲಾಗಿತ್ತು. ಬ್ರಹ್ಮೇಂದ್ರ ಅವರು ಬರೆದ ಈ ಗ್ರಂಥದಲ್ಲಿ ರಸ್ತೆ ರಸ್ತೆಯಲ್ಲಿ ಜನ ಸಾಯುತ್ತಾರೆ ಎಂದು ಬರೆಯಲಾಗಿದ್ದು, ಈಗ ಅದೇ ಆಗುತ್ತಿದೆ. ದೇವರು ಇದ್ದಾನೆ ಎಂಬ ನಂಬಿಕೆಯಿಂದ ಭಾರತೀಯ ಜನರು ಬದುಕುತ್ತಿದ್ದಾರೆ ಎಂದರು.

ನಾವು ಗೋವನ್ನು ದೇವರಾಗಿ ಪೂಜಿಸುತ್ತೇವೆ, ಗೋವು ಆಮ್ಲಜನಕ ತೆಗೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ. ಮುಂದುವರಿದ ದೇಶದಲ್ಲಿ ಕೊರೊನಾ ವೈರಸ್​ಗೆ ಮದ್ದು ಕಂಡುಹಿಡಿಯುವುದಕ್ಕೆ ಆಗಿಲ್ಲ. ಆದರೆ ಕೊರೊನಾ ವೈರಸ್​ ಮದ್ದು ಕಂಡುಹಿಡಿಯುವುದಕ್ಕೆ ಆಗಲ್ಲ ಅನ್ನೋದು ಮೂರ್ಖತನ. ಕೊರೊನಾ ವೈರಸ್​ಗೆ ಹಸುವಿನ ಗೋ ಮೂತ್ರವೇ ಮದ್ದು. ಎಚ್​1 ಎನ್​ 1ಗೆ ಅಮೃತ ಬಳ್ಳಿ ಉತ್ತರ ಕೊಡಲಿಲ್ಲವೇ. ಹಾಗೆಯೇ ಗೋ ಮೂತ್ರದೊಂದಿಗೆ 40 ಗಿಡಮೂಲಿಕೆಗಳನ್ನು ಸೇರಿಸಿದರೆ ಕೊರೊನಾ ವೈರಸ್​ ಗುಣಪಡಿಸಬಹುದು ಎಂಬ ಉಲ್ಲೇಖ ತಾಳೆಗರಿಯಲ್ಲಿದೆ ಎಂದು ಹೇಳಿದರು.

Edited By

venki swamy

Reported By

venki swamy

Comments