ಟಿವಿ ಚಾನೆಲ್‌ ಕಾರ್ಯಕ್ರಮಗಳ  ಮೇಲ್ವಿಚಾರಣೆಗೆ ಸಮಿತಿ ರಚನೆ

13 Feb 2020 12:36 PM | General
411 Report

ಖಾಸಗಿ ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತು ನಿಗಾ ಇಡಲು ರಾಜ್ಯದ 30 ಜಿಲ್ಲೆಗಳಲ್ಲೂ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ' ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮೇಲ್ವಿಚರಣಾ ಸಮಿತಿ ರಚನೆ ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಖಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಜಿಲ್ಲೆಗಳಲ್ಲಿ ರಚನೆ ಮಾಡಿರುವ ಸಮಿತಿಗಳು ಮಾರ್ಚ್ 31ರ ತನಕ ಎಷ್ಟು ಸಭೆಗಳನ್ನು ನಡೆಸಿವೆ. ಕಾರ್ಯಕ್ರಮಗಳ ಕುರಿತು ಎಷ್ಟು ದೂರು ದಾಖಲಾಗಿದೆ. ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿದೆ.

'ಖಾಸಗಿ ಟಿ.ವಿ. ಚಾನೆಲ್‌ ಗಳಲ್ಲಿ ಪ್ರಾಸಾರವಾಗುವ಻ ಕಾರ್ಯಕ್ರಮಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಕೆಳಗಿನ ನಂಬರ್ ಗೆ ದೂರು ನೀಡಬಹುದು. .

ದೂರವಾಣಿ ಸಂಖ್ಯೆ 080-22028013ಗ/94808-41212 ಅಥವ  [email protected] ಐಡಿಯನ್ನು ಬಳಕೆ ಮಾಡಬಹುದಾಗಿದೆ.

Edited By

venki swamy

Reported By

venki swamy

Comments