ಗ್ರಾಹಕರಿಗೆ ಹೊರೆ ಹಾಲು ಉತ್ಪಾದಕರಿಗೆ 'ಬಂಪರ್'
ನಂದಿನಿ ಹಾಲು ಮತ್ತು ಮೊಸರಿನ ದರಗಳನ್ನು ಏರಿಕೆ ಮಾಡಲಾಗಿದೆ. ಲೀಟರ್ಗೆ 2 ರೂಪಾಯಿಯಂತೆ ಏರಿಕೆ ಮಾಡಲಾಗಿದ್ದು, ನೂತನ ದರಗಳು ಫೆಬ್ರವರಿ 1 ರಿಂದಲೇ ಜಾರಿಗೆ ಬರಲಿವೆ.
ಪ್ರಸ್ತುತ ಪ್ರತಿ ಲೀಟರ್ ದರ ಎಷ್ಟಿದೆ?
ನೀಲಿ ಪ್ಯಾಕೆಟ್ – 35 ರೂ.
ಹಸಿರು ಪ್ಯಾಕೆಟ್ – 40 ರೂ.
ಸ್ಪೆಷಲ್ ಪ್ಯಾಕೆಟ್ – 41 ರೂ.
ಶುಭಂ ಪ್ಯಾಕೆಟ್- 41 ರೂ.
ಫೆ. 1 ರಿಂದ 2 ರೂ ದರ ಏರಿಕೆ
ನೀಲಿ ಪ್ಯಾಕೆಟ್ – 37 ರೂ.
ಹಸಿರು ಪ್ಯಾಕೆಟ್ – 42 ರೂ.
ಸ್ಪೇಷಲ್ ಪ್ಯಾಕೆಟ್ – 43 ರೂ.
ಶುಭಂ ಪ್ಯಾಕೆಟ್ – 43 ರೂ.
ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಚಂದ್ರ ಜಾರಕಿಹೊಳಿ, "ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್ ಗೆ ನಾಲ್ಕು ರೂ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ರೂ. ಹೆಚ್ಚಿಸಲಾಗಿದೆ," ಎಂದು ವಿವರಿಸಿದ್ದಾರೆ.
Comments