ಶೀಘ್ರದಲ್ಲೇ ಕೆಎಂಎಫ್ ನಿಂದ ಗ್ರಾಹಕರಿಗೆ ಶಾಕ್!

18 Jan 2020 11:15 AM | General
443 Report

ಸದ್ಯದಲ್ಲೇ ನಂದಿನಿ ಹಾಲು-ಮೊಸರು ದರದಲ್ಲಿ ₹2 ಅಥವಾ ₹3 ಕ್ಕೆ. ಏರಿಯಾಗುವ ಸಾಧ್ಯತೆ ಇದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಭೆ ನಡೆಸಿದ್ದು, ದರ ಹೆಚ್ಚಳಕ್ಕೆ ಒಮ್ಮತದ ಒಪ್ಪಿಗೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಸಿಎಂ ಒಪ್ಪಿಗೆ ಪಡೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಮೂರು ವರ್ಷಗಳಿಂದ ದರ ಏರಿಕೆ ಮಾಡಿಲ್ಲ. ಹೀಗಾಗಿ, ದರ ಹೆಚ್ಚಳ ಮಾಡಬೇಕು’ ಎಂಬ ಪ್ರಸ್ತಾವವನ್ನು 14 ಒಕ್ಕೂಟಗಳು ಕೆಎಂಎಫ್‌ಗೆ ಸಲ್ಲಿಸಿದ್ದವು. ಸದ್ಯ ಸಾಮಾನ್ಯ ಹಾಲು ಲೀಟರ್‌ಗೆ ₹35, ವಿಶೇಷ ಹಾಲು ಲೀಟರ್‌ಗೆ ₹42ರವರೆಗೆ ಇದೆ. ನಂದಿನ ಹಾಲು, ಮೊಸರು ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭಿಸಿದೆ.ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ತಿಳಿಸಿದರು.

Edited By

venki swamy

Reported By

venki swamy

Comments