ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ?
ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರೆ ಇನ್ನು ಕೆಲವು ಕಾರ್ಯಕ್ರಮಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದವು.
ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದಲ್ಲಿ ಶಾಸಕ ಮತ್ತು ಡಿಸಿ ನಡುವೆ ರಂಪಾಟ ನಡೆದಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಡಿಸಿ ಸುನೀಲ್ ಕುಮಾರ್ ನಡುವೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ವಿಜಯ್ ಪ್ರಕಾಶ್‌ರನ್ನು ಸನ್ಮಾನ ಮಾಡಲು ಡಿಸಿ ಒಬ್ಬರೇ ನಡೆದಿದ್ದು, ಶಾಸಕರನ್ನು ನಿರ್ಲಕ್ಷಿಸಿದ್ದಾರೆನ್ನಲಾಗಿದೆ. ಈ ಕಾರಣಕ್ಕೆ ಡಿಸಿ ವರ್ತನೆಗೆ ಸಿಟ್ಟಾದ ಶಾಸಕರು ಅಧಿಕಾರಿಗಳ ಎದುರೇ ಆಕ್ರೋಶ ಹೊರಹಾಕಿದ್ದಾರೆ.
ಆದರೆ ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ಶಾಸಕ ಪರಣ್ಣ ಮುನವಳ್ಳಿ ವೇದಿಕೆ ಕೆಳಗಡೆ ಕುಳಿತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡ ಗಾಯಕ ವಿಜಯ್ ಪ್ರಕಾಶ್, ಕಾರ್ಯಕ್ರಮವನ್ನು ನಿಲ್ಲಿಸಿ, ವೇದಿಕೆಯಿಂದ ಕೆಳಗಡೆ ಇಳಿದು ಬಂದು ವೇದಿಕೆ ಮೇಲೆ ಬರುವಂತೆ ಶಾಸಕ ಪರಣ್ಣಗೆ ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದ ಶಾಸಕರು ಬೆಂಬಲಿಗರೊಂದಿಗೆ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು.
Comments