ಕಜಕಿಸ್ತಾನದಲ್ಲಿ ವಿಮಾನ ಪತನ: ಕನಿಷ್ಛ 14 ಸಾವು

27 Dec 2019 11:04 AM | General
326 Report

ಸುಮಾರು 95 ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಜಕಿಸ್ತಾನದ ಅಲ್ಮಾಟಿ ನಗರದ ಬಳಿ ವಿಮಾನ ಪತನಗೊಂಡು ಸುಮಾರು 14 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಪತನಕ್ಕೀಡಾದ ವಿಮಾನವು ರಾಜಧಾನಿ ನೂರ್​​​-ಸುಲ್ತಾನ್​​ಗೆ ಹಾರಾಟ ನಡೆಸುತ್ತಿತ್ತು , ಈ ವಿಮಾನವು ಟೇ-ಆಫ್ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಬೇಲಿಯನ್ನು ತುಂಡರಿಸಿ ಸಣ್ಣ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಕಜಕಿಸ್ತಾನದ ನಾಗರಿಕ ವಿಮಾನಯಾನ ಸಮಿತಿಯು ತಿಳಿಸಿದೆ..

Edited By

venki swamy

Reported By

venki swamy

Comments