ಕೇಂದ್ರದಿಂದ ದೇಶದ ಜನತೆಗೆ ಮತ್ತೊಂದು ಶಾಕ್ !!ಜಿಎಸ್‌ಟಿ ವ್ಯಾಪ್ತಿಗೆ ಬರದೇ ಇರುವ ಉತ್ಪನ್ನಗಳಿಗೂ ತೆರಿಗೆ!!?
ಕೇಂದ್ರ ಸರ್ಕಾರವು ದೇಶದ ಜನತೆಗೆ ಒಂದರ ಮೇಲೆ ಒಂದರಂತೆ ನೀಡುತ್ತಿದ್ದು ಹೀಗ ಮತ್ತೊಂದು ಬಿಗ್ ಶಾಕ್ ನೀಡಲು ಮುಂದಾಗಿದ್ದು, ಹಣ್ಣು, ತರಕಾರಿ, ಮೊಟ್ಟೆ, ಮಾಂಸ ಮೀನು ಸೇರಿದಂತೆ ಹಲವು ಆಹಾರ ಉತ್ಪನ್ನಗಳಿಗೂ ತೆರಿಗೆ ವಿಧಿಸಲು ಮುಂದಾಗಿದೆ ಎನ್ನಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ ಟಿ ಪರಿಹಾರ ಸೆಸ್ ಸಂಗ್ರಹದಲ್ಲಿ 60 ಸಾವಿರ ಕೋಟಿ ರೂ. ಕೊರತೆ ಬೀಳುವ ಅಂದಾಜು ಮಾಡಲಾಗಿದ್ದು, ಇದನ್ನು ತುಂಬಿಕೊಳ್ಳಲು ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ಮೀನು ಹೀಗೆ ಜಿಎಸ್‌ಟಿ ವ್ಯಾಪ್ತಿಗೆ ಬರದೇ ಇರುವ ಉತ್ಪನ್ನಗಳಿಗೂ ತೆರಿಗೆ ವಿಧಿಸುವಂತೆ ಅಧಿಕಾರಿಗಳ ಸಮಿತಿ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 18ರಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಗೆ ಸಮಿತಿಯು ತನ್ನವರದಿ ಸಲ್ಲಿಸಿದೆ. ಕೆಲವು ಸರಕುಗಳಲ್ಲಿನ ತೆರಿಗೆಯನ್ನು ಮರುಪರಿಶೀಲನೆ ನಡೆಸವಂತೆಯೂ ಸಲಹೆ ನೀಡಲಾಗಿದೆ ಎನ್ನಲಾಗುತ್ತಿದೆ.
Comments