ಭಾರತೀಯ ರೈಲ್ವೆಯಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಇಲಾಖೆಯು ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲ್ಲಿ ಒಟ್ಟು 251 ಕ್ಲರ್ಕ್ ಹುದ್ದೆಗಳಿಗೆ ನಡೆಯಲಿದ್ದು, ಜೂನಿಯರ್ ಕ್ಲರ್ಕ್‌ನ 171 ಮತ್ತು ಸೀನಿಯರ್ ಕ್ಲರ್ಕ್‌ಗೆ 80 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಜನವರಿ 2020 ಆಗಿದೆ.
ಜೂನಿಯರ್ ಕ್ಲರ್ಕ್ ಹುದ್ದೆಗೆ 12 ತರಗತಿ ಪಾಸಾಗಿರಬೇಕು. ಅಭ್ಯರ್ಥಿಯ ಇಂಗ್ಲಿಷ್ ಟೈಪಿಂಗ್ ವೇಗ ನಿಮಿಷಕ್ಕೆ 30 ಪದಗಳಾಗಿರಬೇಕು ಮತ್ತು ಹಿಂದಿ ಟೈಪಿಂಗ್ ವೇಗವು ನಿಮಿಷಕ್ಕೆ 25 ಪದಗಳಾಗಿರಬೇಕು. ಸೀನಿಯರ್ ಕ್ಲರ್ಕ್ ಹುದ್ದೆಗೆ ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ ಹೊಂದಿರಬೇಕು.
Comments