ಕಬ್ಬಿನ ಗದ್ದೆಯಲ್ಲಿ 17ನೇ ಮಗುವಿಗೆ ಜನ್ಮ ನೀಡಿದ "ಮಹಾ"ತಾಯಿ!!

18 Dec 2019 11:06 AM | General
421 Report

ಕೆಲಸ ಅರಸಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದ ಮಹಿಳೆಯೊಬ್ಬರು ಮಂಗಳವಾರ ಕಬ್ಬಿನ ಗದ್ದೆಯಲ್ಲಿಯೇ ತಮ್ಮ 17ನೇ ಮಗುವಿಗೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬುಡಕಟ್ಟು ಗೋಪಾಲ ಜನಾಂಗಕ್ಕೆ ಸೇರಿದ ಲಂಕಾಬಾಯಿ (38) ಎಂಬ ಮಹಿಳೆ ಮಂಗಳವಾರ ತಮ್ಮ 17ನೇ ಮಗುವಿಗೆ ಜನ್ಮ ನೀಡಿದ್ದರು.
20ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಆರೋಗ್ಯಾಧಿಕಾರಿಗಳು ಸೆ.8ರಂದು ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ನ.21ರಂದು ಆರೋಗ್ಯ ತಪಾಸಣೆಗೆಂದು ಬಂದಾಗ ಬೆಳಗಾವಿಗೆ ವಲಸೆ ಹೋಗಿರುವುದು ತಿಳಿದು ಬಂದಿದೆ.ಆದರೆ ದುರಾದೃಷ್ಟವಶಾತ್ ಆರೋಗ್ಯ ಸಮಸ್ಯೆಯಿಂದ ಹುಟ್ಟಿದ ಬಳಿಕ ಆ ಹೆಣ್ಣು ಮಗು ಮೃತಪಟ್ಟಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಮಹಿಳೆ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಆಗ ಆಕೆ 20ನೇ ಬಾರಿಗೆ ಗರ್ಭ ಧರಿಸಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ದಾಖಲಿಸಿಕೊಂಡಿದ್ದರು. ಈಗಾಗಲೇ ಮಹಿಳೆಗೆ 11 ಮಕ್ಕಳಿದ್ದು, ಅದರಲ್ಲಿ 5 ಮಕ್ಕಳು ಮೃತ ಪಟ್ಟಿದ್ದಾರೆ. 3 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ

Edited By

venki swamy

Reported By

venki swamy

Comments