ಬಿಎಸ್‌ಎನ್‌ಎಲ್ 4G ಸೇವೆಯ ಹೊಸ ಪ್ರಿಪೇಡ್ ಪ್ಲ್ಯಾನ್ ಕಂಡು ಬೆಚ್ಚಿದ ಖಾಸಗಿ ಟೆಲಿಕಾಂ ಸಂಸ್ಥೆಗಳು..!!

13 Dec 2019 11:00 AM | General
442 Report

ಖಾಸಗಿ ಟೆಲಿಕಾಂ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ, ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಡೆಗೂ 4G ಸೇವೆ ಆರಂಭಿಸಿದೆ.

ಬಿಎಸ್‌ಎನ್ಎಲ್ ಈಗ 4G ನೆಟವರ್ಕ ಸೇವೆಯನ್ನು ಪ್ರಾರಂಭಿಸಿದ್ದು, ಗ್ರಾಹಕರಿಗೆ ಖುಷಿ ತಂದಿದೆ. 4G ನೆಟವರ್ಕ ಬಿಡುಗಡೆಯ ಜೊತೆಗೆ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ಗಳನ್ನು ಸಹ ಪರಿಚಯಿಸಿದೆ. ಪ್ರಾರಂಭಿಕ ಹಂತವಾಗಿ ಮೊದಲು 5 ಟೆಲಿಕಾಂ ಸರ್ಕಲ್‌ ವ್ಯಾಪ್ತಿಗಳಲ್ಲಿ ಮಾತ್ರ 4G ನೆಟವರ್ಕ ಸೇವೆಯನ್ನು ಶುರುಮಾಡಿದ್ದು, ಬರುವ ಮಾರ್ಚ 2020ರ ವೇಳೆಗೆ ದೇಶದ ಎಲ್ಲ ಭಾಗದಲ್ಲಿಯೂ 4G ಒದಗಿಸುವ ಸಾಧ್ಯತೆಗಳಿವೆ.

4G ಸೇವೆಯ ಬೆನ್ನಲೇ ಬಿಎಸ್‌ ಎನ್ ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96 ರೂ.ಗಳಾಗಿದ್ದು, 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಮತ್ತೊಂದು ಪ್ಲ್ಯಾನ್ 236 ರೂ. ಬೆಲೆಯನ್ನು ಹೊಂದಿದ್ದು 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿವೆ. ಈ ಎರಡು ಪ್ಲ್ಯಾನ್‌ ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ.

Edited By

venki swamy

Reported By

venki swamy

Comments