ರಾಮನಗರ, ಚನ್ನಪಟ್ಟಣಕ್ಕೆ ಕಾವೇರಿ ನೀರು ಸ್ಥಗಿತ

12 Dec 2019 11:39 AM | General
424 Report

ಮಾಜಿ ಮುಖ್ಯಮಂತ್ರಿ ಸ್ವ ಕ್ಷೇತ್ರಗಳಾದ ಚನ್ನಪಟ್ಟಣ ಮತ್ತು ರಾಮನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದು ಕುಡಿಯುವ ನೀರಿಗೆ ಜನ ಪರದಾಡಬೇಕಿದೆ!. ನೀರು ಸರಬರಾಜು ಮಾಡುವ ಮಾರ್ಗದ ಪೈಪ್ ಲೈನ್‍ನಲ್ಲಿ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ.

ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಕಾವೇರಿ ನೀರನ್ನು ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಶುದ್ಧೀಕರಿಸಿ ಚನ್ನಪಟ್ಟಣ ಹಾಗು ರಾಮನಗರಕ್ಕೆ ಪೈಪ್‌ಲೈನ್‌ಗಳ ಮೂಲಕ ಪೂರೈಸಲಾಗುತಿತ್ತು. ತೊರೆಕಾಡನಹಳ್ಳಿಯ ಬಿಡಬ್ಲ್ಯೂಎಸ್‍ಎಸ್‌ಬಿ ಆವರಣದ ಹತ್ತಿರ ಕುಡಿಯುವ ನೀರು ಸರಬರಾಜು ಮಾಡುವ 600 ಮಿಮಿ ವ್ಯಾಸದ ಪಿಎಸ್ಪಿ ಏರು ಕೊಳವೆಯ ಮಾರ್ಗದಲ್ಲಿ ಅಧಿಕವಾಗಿ ನೀರು ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Edited By

venki swamy

Reported By

venki swamy

Comments