10 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿ ಉಡಾವಣೆ

11 Dec 2019 4:17 PM | General
390 Report

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ಪಿಎಸ್ಎಲ್ ವಿ-ಸಿ48 ರಾಕೆಟ್ ಯಶಸ್ವಿಯಾಗಿ ಹಾರಿದ್ದು, ತನ್ನೊಂದಿಗೆ ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಮೂಲಕ ಭೂ ಸರ್ವೇಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹ ರಿಸ್ಯಾಟ್-2ಬಿಆರ್1, 628 ಕೆ.ಜಿ. ತೂಕ ಹೊಂದಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಕಾರ್ಯಗಳಂತಹ ವಿವಿಧ ಯೋಜನೆಗಳಿಗೆ ನೆರವಾಗಲಿದೆ.

10 ಉಪಗ್ರಹಗಳ ಪೈಕಿ 9 ಉಪಗ್ರಹಗಳು ವಿದೇಶದಾಗಿದ್ದು, ಇದರಲ್ಲಿ ಇಸ್ರೋ ನಿರ್ಮಿತ ' ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್ 1 ಉಪಗ್ರಹ ಕೂಡ ನಭಕ್ಕೆ ಹಾರಿದ್ದು, ಇದನ್ನು ದೇಶದ ಎರಡನೇ 'ಗುಪ್ತಚರ ಕಣ್ಣು' ಎಂದೇ ಕರೆಯಲಾಗುತ್ತದೆ. ಇದಲ್ಲದೆ ಅಮೆರಿಕದ 6, ಇಸ್ರೇಲ್ ನ 1, ಇಟಲಿಯ 1 ಮತ್ತು ಜಪಾನ್‌ ನ 1 ಉಪಗ್ರಹಗಳು ಸೇರಿವೆ.

 

Edited By

venki swamy

Reported By

venki swamy

Comments