ಏರ್ಟೆಲ್ ನೂತನ ದರಗಳ ಪಟ್ಟಿ ಯಾವುದಕ್ಕೆ ಎಷ್ಟು ಎಕ್ಸ್ಟ್ರಾ ಕೊಡ್ಬೇಕು?
ಭಾರತೀಯ ಟೆಲಿಕಾಂ ಕಂಪನಿಗಳು ವ್ಯವಹಾರದಲ್ಲಿ ನಷ್ಟವನ್ನು ಸರಿತೂಗಿಸಲು ದರ ಏರಿಕೆಯ ಮೊರೆ ಹೋಗಿವೆ. ಏರ್ಟೆಲ್ ತನ್ನ ವಿವಿಧ ಪ್ಲಾನ್ಗಳಿಗೆ ದಿನಕ್ಕೆ 50 ಪೈಸೆಯಿಂದ 2.85 ರೂ ವರೆಗೆ ದರವನ್ನು ಹೆಚ್ಚಿಸಿದ.
28 ದಿನಗಳ ಅವಧಿಗೆ ₹130 ಮೌಲ್ಯದ ಟಾಕ್‌ಟೈಮ್, 200MB ಡೇಟಾ, 300 SMS ನೀಡುತ್ತಿದ್ದ ₹65 ಪ್ಲಾನ್ ದರ ₹79 ಆಗಲಿದೆ. ಇದರಲ್ಲಿ ₹63.95 ಟಾಕ್‌ಟೈಮ್ ಸಿಗಲಿದೆ.
28 ದಿನಗಳ ಅವಧಿಗೆ ₹26.66 ಟಾಕ್ಟೈಮ್, 100MB ಡೇಟಾವನ್ನು ಒಳಗೊಂಡಿದ್ದ ₹35ರ ಪ್ಲಾನ್ ದರ ಹೆಚ್ಚಾಗಿದೆ. ಇದರ ಬೆಲೆ ಇನ್ಮುಂದೆ ₹49 ಆಗಿದೆ. ₹38.52 ಟಾಕ್ ಟೈಮ್ ಸಿಗುತ್ತೆ.
ಅನಿಯಮಿತ ಕಾಲಿಂಗ್, 100SMS, 1.5GB ಡೇಟಾ ಒಳಗೊಂಡಿದ್ದ ₹199 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ಕೊಡಬೇಕು.
ಅತಿ ಹೆಚ್ಚು ಜನಪ್ರಿಯವಾಗಿರುವ ₹249 ಪ್ಲಾನ್‌ಗೆ ಗ್ರಾಹಕರು ಇನ್ಮುಂದೆ ₹298 ಪಾವತಿಸಬೇಕು. ಅನ್ಲಿಮಿಟೆಡ್ ಕಾಲಿಂಗ್, 100 SMS, ಪ್ರತಿದಿನ 2GB ಡೇಟಾ ನೀಡಲಾಗುತ್ತದೆ.
Comments