ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ ಪಾಕ್ ಸಿಂಗರ್..!!

23 Oct 2019 2:15 PM | General
536 Report

ಕೇಂದ್ರ ಸರ್ಕಾರದ ಜಮ್ಮು-ಕಾಶ್ಮೀರದ 370  ನೇ ವಿಧಿ ರದ್ದುಗೊಳಿಸಿದ ಬಳಿಕ , ಪಾಕಿಸ್ತಾನ ಸಿಂಗರ್ ವೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಇದೇ ಪಾಕ್, ಸಿಂಗರ್ ರಬಿ ಪಿರ್ಜಾಡಾ  ಎನ್ನುವವರು ತನ್ನ ಸುತ್ತ ಮೊಸಳೆ, ಹೆಬ್ಬಾವು ಮತ್ತು ಹಾವುಗಳನ್ನು ಹಾಕಿ ಅದರ ಬಾಯಿಗೆ ಗಮ್ ಟೇಪ್ ಹಾಕಿ ಕಾಶ್ಮೀರ ವಿಚಾರವಾಗಿ ನೀವು ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ಧಳು.

ಈಗ ಅದೇ ಗಾಯಕಿ ಪ್ರಧಾನಿ ಮೋದಿಗೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾಳೆ. ಮೋದಿ ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾಳೆ ಈಕೆ , ತಾನು ಸೂಸೈಡ್ ಜಾಕೆಟ್ ಹಾಕಿಕೊಂಡಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ  ಪೋಸ್ಟ್  ಹಾಕಿ ಮೋದಿ ವಿರುದ್ಧ ಮಾತನಾಡಿದ್ದಾಳೆ. ನಾನು ಕಶ್ಮೀರದ ಮಗಳು, 370 ವಿಧಿ ರದ್ದುಗೊಳಿಸಿದ್ದನ್ನು ಹಿಂಪಡೆಯದಿದ್ದರೇ  ನಿಮ್ಮನೇ ಸುಮ್ಮನೇ ಬಿಡುವುದಿಲ್ಲವೆಂದಿದ್ದಾಳೆ, ಅಂದಹಾಗೇ ಈ ರೀತಿಯ ಪೋಸ್ಟ್ ಗೆ ಹಲವಾರು ಜನ ಕಮೆಂಟ್ ಮಾಡುತ್ತಿದ್ದು,  ಈ ರೀತಿಯಿಂದಾಗಿ ಪಾಕಿಸ್ತಾನದ ಿಮೇಜ್ ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

Edited By

Manjula M

Reported By

Manjula M

Comments