ಇಸ್ರೋ ಮಾಡಿದ ಅದ್ಭುತ ಕಾರ್ಯಕ್ಕೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ರಾಹುಲ್ ಗಾಂಧಿ..

07 Sep 2019 12:31 PM | General
345 Report

ಚಂದ್ರಯಾನ -2 ಇಸ್ರೋ ಕೈಗೊಂಡಿದ್ದ ಯೋಜನೆಯಾಗಿದ್ದು ಈ ಯೋಜನೆ ಬಹುತೇಕ ಯಶಸ್ವಿಯಾಗಿ ನಡೆದಿತ್ತು.. ಆದರೆ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಂಪರ್ಕ ಕಡಿತಗೊಂಡಿದೆ. ಚಂದ್ರಯಾನ-2 ಮೂನ್ ಮಿಷನ್‍ನಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕಾಗಿ ದೇಶವೇ ಸಂಭ್ರಮಿಸಿದೆ.. ಈ ಬಗ್ಗೆ ರಾಜಕಾರಣಿಗಳು ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚಂದ್ರಯಾನ-2 ಮೂನ್ ಮಿಷನ್‍ನಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕಾಗಿ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ನಿಮ್ಮ ಈ ಸಾಧನೆ ಭಾರತೀಯ ವೈಜ್ಞಾನಿಕ ಹಾದಿಗೆ ಮತ್ತು ಮುಂದಿನ ಭಾರತ ಕಾರ್ಯಚರಣೆಗೆ ಅಡಿಪಾಯವನ್ನು ಹಾಕಿದೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ಧಾರೆ.  ಅದೇ ರೀತಿ ಕಾಂಗ್ರೆಸ್ ಪಕ್ಷವು ಕೂಡ ಟ್ವೀಟ್ ಮಾಡಿದ್ದು, ಈ ಉದ್ವಿಗ್ನ ಸಮಯದಲ್ಲಿ ರಾಷ್ಟ್ರವು ಇಸ್ರೋದ ಸಂಪೂರ್ಣ ತಂಡ ಜೊತೆ ನಿಂತಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ತಿಳಿಸಿದ್ದಾರೆ. ಇಸ್ರೋ ಮಾಡಿದ ಈ ಸಾಧನೆಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನ ಹಾಡಿದ್ದಾರೆ.

Edited By

Manjula M

Reported By

Manjula M

Comments