'ಅನ್ನಭಾಗ್ಯ' ಯೋಜನೆಯ ಫಲಾನುಭವಿಗಳಿಗೆ ಇನ್ಮುಂದೆ ತೊಗರಿಬೇಳೆ ಸಿಗಲ್ಲ..!!

07 Sep 2019 10:33 AM | General
491 Report

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿದ್ದಂತಹ ಅನ್ನಭಾಗ್ಯ ಯೋಜನೆಯನ್ನು ಈಗಿನ ಬಿಜೆಪಿ ಸರ್ಕಾರ ನಿಲ್ಲಿಸುವುದಾಗಿ ಚಿಂತನೆ ನಡೆಸಿತ್ತು ಎನ್ನಲಾಗುತ್ತಿತ್ತು.. ಆದರೆ ಇದೀಗ ಅನ್ನಭಾಗ್ಯ ಯೋಜನೆಯಲ್ಲಿ ಕೊಡುತ್ತಿದ್ದಂತಹ ತೊಗರಿಬೇಳೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಿಂದ ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಲ್ಲಿ ತೊಗರಿಬೇಳೆ ವಿತರಿಸುವುದಿಲ್ಲ. ಈ ಹಣವನ್ನು ರೈತರ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ. .

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ  ಪ್ರತಿ ಒಬ್ಬ ಸದಸ್ಯರಿಗೆ ತಲಾ 7 ಕೆಜಿ ಅಕ್ಕಿ ಹಾಗೂ ಕುಟುಂಬಕ್ಕೆ 38 ರೂ. ದರದಲ್ಲಿ 1 ಕೆಜಿ ತೊಗರಿಬೇಳೆಯನ್ನು ನೀಡಲಾಗುತ್ತಿತ್ತು.. ಸೆಪ್ಟೆಂಬರ್ ತಿಂಗಳ ತೊಗರಿಬೇಳೆ ಖರೀದಿ ಪ್ರಕ್ರಿಯೆ ನಿಲ್ಲಿಸಲು ಸರ್ಕಾರ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ…ಪ್ರತಿ ತಿಂಗಳು 12,500 ಮೆಟ್ರಿಕ್ ಟನ್ ತೊಗರಿಬೇಳೆ ಖರೀದಿ ಮಾಡಲು ವಾರ್ಷಿಕ 800 ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗುತ್ತಿದೆ. ಹಾಗಾಗಿ ತೊಗರಿ ಬೇಳೆ ನೀಡುವುದನ್ನು ನಿಲ್ಲಿಸಲಾಗುತ್ತಿದೆ ಎಂದಿದ್ದಾರೆ. ತೊಗರಿಬೇಳೆ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳುವುದರಿಂದ ತೊಗರಿಬೇಳೆ ವಿತರಿಸುವುದಿಲ್ಲ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್, ಅದನ್ನು ಹೊರತು ಪಡಿಸಿ ಆರ್ಥಿಕವಾಗಿ ಚೆನ್ನಾಗಿರುವವರು ಕೂಡ ಬಿಪಿಎಲ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ, ಅವರೆಲ್ಲಾ ತಾನಾಗಿಯೇ ಕಾರ್ಡ್ ಗಳನ್ನು ಹಿಂದಿರುಗಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.

Edited By

Manjula M

Reported By

Manjula M

Comments