ಕನ್ನಡದ ಕೋಟ್ಯಾಧಿಪತಿಗೆ ಬಂದು ಟ್ರೋಲ್ ಆದ ಬಿಜೆಪಿ ಸಂಸದರು..!!
ಕನ್ನಡದ ಬಿಗ್ ರಿಯಾಲಿಟಿ ಷೋಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಕೂಡ ಒಂದು.. ಈ ವಾರದ ಕನ್ನಡದ ಕೊಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಈ ವಾರ ಸ್ಪರ್ಧಿಗಳಾಗಿ ಬಂದ ಸಂಸದರಾ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆದ್ದ ಹಣವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡಲು ನಿರ್ಧಾರ ಮಾಡಿದ್ದಾರೆ. . ಇದನ್ನು ನೋಡಿದ ಕೆಲವು ನೆಟ್ಟಿಗರು ಸೋಷಿಯಲ್ ಮಿಡೀಯಾದಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ. ನೀವು ಸಂಸದರಾಗಿ ನಿಮಗೆ ಪರಿಹಾರ ಕೊಡಲು ಕೋಟ್ಯಾಧಿಪತಿ ಕಾರ್ಯಕ್ರಮವೇ ಶೋ ಬೇಕಾ? ಅಷ್ಟು ತಾಕತ್ತಿದ್ದರೆ ಕೇಂದ್ರದಿಂದ ಪರಿಹಾರ ತನ್ನಿ. ಅದು ಬಿಟ್ಟು ಕೇವಲ 2 ಕೋಟಿ ರೂ. ಹಣ ಗೆದ್ದು ಸಂತ್ರಸ್ತರಿಗೆ ಕೊಡುತ್ತಿದ್ದೀರಾ ಎಂದು ಕೆಲವರು ಸಂಸದರನ್ನು ಟ್ರೋಲ್ ಮಾಡಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಪ್ರತಾಫ್ ಸಿಂಹ ಭಾಗವಹಿಸಿರುವ ಕಾರ್ಯಕ್ರಮ ಈ ವಾರ ಪ್ರಸಾರವಾಗಲಿದೆ.
Comments