ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ..!!
![](https://www.civicnews.in/admin/news_images/18401567748982.jpeg)
74 ವರ್ಷದ ಮಹಿಳೆಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ವಯಸ್ಸಿನಲ್ಲಿ ಮಗುವನ್ನು ಹೆತ್ತ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. 74 ವರ್ಷದ ಮಹಿಳೆ ಅವಳಿ ಹೆಣ್ಣು ಮಕ್ಕಳಿಗೆ ಗುರುವಾರ ಜನ್ಮ ನೀಡಿದ್ದಾರೆ.
ಐವಿಎಫ್ ಮೂಲಕ ಗರ್ಭ ಧರಿಸಿದ್ದ ಮಂಗಯ್ಯಮ್ಮ ಅವರಿಗೆ ಗುಂಟೂರು ನಗರದ ಅಹಲ್ಯಾ ನರ್ಸಿಂಗ್ ಹೋಂನ ನಾಲ್ವರು ತಜ್ಞ ವೈದ್ಯರು ಸಿಜೇರಿಯನ್ ವಿಧಾನದ ಮೂಲಕ ಹೆರಿಗೆ ಮಾಡಿಸಿದ್ದಾರೆ.ತಾಯಿ-ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದು ವೈದ್ಯಲೋಕಕ್ಕೆ ಅಚ್ಚರಿಯನ್ನುಂಟು ಮಾಡಿದೆ.. ವಿಶ್ವದಲ್ಲಿಯೇ ಮಗು ಹೆತ್ತ ಅತ್ಯಂತ ಹಿರಿಯ ಮಹಿಳೆ ಮಂಗಯ್ಯಮ್ಮ ಎನ್ನಲಾಗಿದೆ, ಮಂಗಯ್ಯಮ್ಮ ಅವರ ಮದುವೆಯಾಗಿ 54 ವರ್ಷಗಳೇ ಆಗಿತ್ತು. ಮಕ್ಕಳಿಗಾಗಿ ಪರಿತಪಿಸುತ್ತಿದ್ದ ಅವರು ಪತಿ ವೈ.ರಾಜಾರಾವ್ ಅವರೊಡನೆ ಕಳೆದ ವರ್ಷ ಕೃತಕ ಗರ್ಭಧಾರಣೆ ತಜ್ಞರನ್ನು ಸಂಪರ್ಕಿಸಿದ್ದರು. ವೈದ್ಯರು ಇದಕ್ಕೆ ಒಪ್ಪಿ ಐವಿಎಫ್ ಚಿಕಿತ್ಸೆಯನ್ನು ನೀಡಿದ್ದರು,, ಇದೀಗ ಹೆರಿಗೆಯಾಗಿ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ
Comments