ಬೈಕ್ ಸವಾರನಿಗೆ 17 ಸಾವಿರ ರೂ.ದಂಡ..! ಕಾರಣ ಗೊತ್ತಾ..?

05 Sep 2019 9:33 AM | General
383 Report

ಇತ್ತಿಚಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಕೇಂದ್ರ ಸರ್ಕಾರ ಉಲ್ಲಂಘನೆ ಪರಿಷ್ಕೃತ ದಂಡವನ್ನು ಈಗಾಗಲೇ ಬೆಂಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ… ಹಳೆಯ ದಂಡಕ್ಕಿಂತ ಈ ಬಾರಿ ಕೇಂದ್ರ ಸರ್ಕಾರ ನಿಗಧಿ ಮಾಡಿದ ದಂಡದ ಮೊತ್ತ ಅಧಿಕವಾಗಿದೆ. ಬೈಕ್ ಸವಾರರು ಒಮ್ಮೆ ಟ್ರಾಫಿಕ್ ಪೊಲೀಸ್ ಗೆ ಸಿಲುಕಿಕೊಂಡರೆ ಜೇಬಿಗೆ ಕತ್ತರಿ ಬಿದ್ದಂಗೆ ಅರ್ಥ.. ಹಾಗಾಗಿ ಬೈಕ್ ಸವಾರರು ಹೆಲ್ಮೇಟ್ ಮತ್ತು ಪರವಾನಗಿ, ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು..

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡದ ನಿಯಮವನ್ನು ಬೆಂಗಳೂರು ಪೊಲೀಸರು ಜಾರಿಗೆ ತಂದಿದ್ದು, ಮದ್ಯ ಸೇವನೆ ಮಾಡಿ ವಾಹನ ಓಡಿಸಿದ ಸವಾರನಿಗೆ 17 ಸಾವಿರ ರೂ.ದಂಡ ವಿಧಿಸಲಾಗಿದೆ. ಮದ್ಯ ಸೇವಿಸಿ ವಾಹನ ಚಲಾನೆಗೆ 10 ಸಾವಿರ ರೂ. ಡಿಎಲ್ ರಹಿತ ಚಾಲನೆ 5 ಸಾವಿರ ರೂ. ಮತ್ತು ಸವಾರ, ಹಿಂಬದಿ ಸವಾರ ಹೆಲ್ಮೆಟ್ ರಹಿತ ಚಾಲನೆಗೆ ತಲಾ 1 ಸಾವಿರ ರೂ. ಸೇರಿ ಒಟ್ಟು 17 ಸಾವಿರ ರೂ.ಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ. ಸೆ. 3 ರಂದು ಹೆಬ್ಬಾಳ ಸಂಚಾರ ಪೊಲೀಸರು ದಾಖಲಿಸಿದ್ದ ಪಾನಮತ್ತ ಚಾಲನೆ ಪ್ರಕರಣದಲ್ಲಿ 10 ಸಾವಿರ ರೂ. ದಂಡ ವಿಧಿಸಿತ್ತು. ಕೇಂದ್ರ ಸರ್ಕಾರವು ಮೋಟಾರು ವಾಹನಗಳ ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಹೆಚ್ಚಿಸಿ ದೇಶವ್ಯಾಪಿ ಸೆ. 1 ರಿಂದ ಜಾರಿಗೆ ತಂದಿದೆ.  ಒಟ್ಟಿನಲ್ಲಿ 17 ಸಾವಿರ ದಂಡ ಕಟ್ಟುವುದಕ್ಕಿಂತ ನಿಯಮ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವುದು ಉತ್ತಮ. ಬೈಕ್ ಸವಾರರ ಸೇಪ್ಟಿಯೂ ಕೂಡ ಮುಖ್ಯವಾಗುತ್ತದೆ.. ಆದರೆ ಕೆಲವರು ಹೇರ್ ಸ್ಟೈಲ್ ಹಾಳಾಗುತ್ತೆ ಎಂದು ಹೆಲ್ಮೆಟ್ ಇಲ್ಲದೆ ಹೋಗಿ ಪೊಲೀಸರ ಕೈಗೆ ಸಿಲುಕಿಕೊಳ್ಳುತ್ತಾರೆ.

Edited By

Manjula M

Reported By

Manjula M

Comments