ಹೆಲ್ಮೆಟ್ ಇಲ್ಲದವರ ಹೊಸ ಐಡಿಯಾ..!! ದಂಗಾದ ಟ್ರಾಫಿಕ್ ಪೊಲೀಸ್..!!
ಸದ್ಯ ನಮ್ಮ ದೇಶದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೇ ದಂಡ ಕಟ್ಟುವವರೇ ಹೆಚ್ಚು.. ಅದರಲ್ಲೂ ಈ ಹೆಲ್ಮೇಟ್ ವಿಷಯಕ್ಕೆ ಬಂದರೆ ಮುಗಿತು..ಹೆಲ್ಮೇಟ್ ಹಾಕಿಕೊಳ್ಳೋಕೆ ನಮ್ ಜನಕ್ಕೆ ಯಾಕ್ ಇಷ್ಟ ಇಲ್ವೋ ಗೊತ್ತಿಲ್ಲ.. ನಮ್ಮ ಸೇಪ್ಟಿಗೋಸ್ಕರ ಹೆಲ್ಮೇಟ್ ನಿಯಮ ಜಾರಿಗೆ ತಂದರೆ ಜನ ಕೇರ್ ಮಾಡೋದೆ ಇಲ್ಲ ಬೈಕ್ ಸವಾರರಿಗೆ ಹೆಲ್ಮೆಟ್ ಅಂದರೆ ಅಲರ್ಜಿ. ಹಾಗಾಗಿ ಹೆಲ್ಮೇಟ್ ಹಾಕಿಕೊಳ್ಳಲು ಹಿಂದೆ ಮುಂದೆ ನೋಡ್ತಾರೆ.
ಇನ್ನೂ ಕೆಲವರಿಗೆ ತಮ್ಮ ತಲೆಗಿಂತ ತಲೆಗೂದಲೇ ಇಷ್ಟ. ಪೊಲೀಸರಿಂದ ದಂಡ ಹಾಕಿಸಿಕೊಳ್ಳುವುದಕ್ಕಿಂತ ತಪ್ಪಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಒಂದರಲ್ಲಿ ಹೆಲ್ಮೆಟ್ ಇಲ್ಲದ ಹತ್ತಾರು ಬೈಕ್ ಸವಾರರು ಸಂಚಾರಿ ಪೊಲೀಸರ ಎದುರು ಬೈಕ್ ತಳ್ಳಿಕೊಂಡು ಹೋಗುತ್ತಿದ್ದಾರೆ.ಬೈಕ್ ಓಡಿಸುವಾಗ ಹೆಲ್ಮೆಟ್ ಇಲ್ಲದಿದ್ದರೆ ದಂಡ ಹಾಕುತ್ತಾರೆ. ಆದರೆ ಬೈಕ್ ತಳ್ಳಿಕೊಂಡು ಹೋದರೆ ದಂಡ ಹಾಕುವ ನಿಯಮವಿಲ್ಲ. ಈ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದ್ದು, ಕೆಲವರು ಅವರ ಚಾಣಾಕ್ಷತೆ ಹೊಗಳಿದರೆ ಮತ್ತೆ ಕೆಲವರು ಹೆಲ್ಮೇಟ್ ಹಾಕಿಕೊಂಡಿದ್ದರೆ ಈ ರೀತಿ ಪೆಟ್ರೋಲ್ ಇರುವ ಗಾಡಿಯನ್ನು ತಳ್ಳಿಕೊಂಡು ಹೋಗುವ ಪ್ರಸಂಗ ಇರುತ್ತಿತ್ತ ಎಂದು ಪ್ರಶ್ನೆ ಮಾಡಿದ್ದಾರೆ.
https://www.facebook.com/1964915907151570/videos/520296282108384/
Comments