ನೀವು `Tik Tok' ಬಳಸುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್…!
ಸದ್ಯ ಟ್ರೆಂಡಿಂಗ್ ನಲ್ಲಿ ಇರುವ ಆ್ಯಪ್ ಎಂದರೆ ಅದು ಟಿಕ್ ಟಾಕ್ .. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರು ಕೂಡ ಟಿಕ್ ಟಾಕ್ ಗೆ ಅಡಿಟ್ ಆಗಿದ್ದಾರೆ.. ಕಲಾವಿದರಿಗೆ ಇದೊಂದು ವೇದಿಕೆಯಾಗಿದೆ.. ಮನರಂಜನೆಯ ತಾಣವಾಗಿದೆ.. ಟಿಕ್ ಟಾಕ್ ವಿಡಿಯೋ ಹಾಕಿ ಫ್ಯಾನ್ ಫಾಲೋವರ್ಸ್ ಗಳನ್ನು ಹೆಚ್ಚು ಮಾಡಬೇಕೆಂಬ ಆಸೆಯಿಂದ ವಿಧವಿಧವಾದ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ.. ಈಗಾಗಲೇ ಟಿಕ್ ಟಾಕ್ ಆಯಪ್ ಬಳಕೆಯಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದರೂ, ಆದರೆ ಅದರ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ…
ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಆಯಪ್ ಗೆ ಮರುಳಾಗುತ್ತಿದ್ದಾರೆ. ಇದೀಗ ಟಿಕ್ ಟಾಕ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಟಿಕ್ ಟಾಕ್ ಆಯಪ್ ನಲ್ಲಿ ಹೊಸ ರೂಪದ ಮೋಸವೊಂದು ಪತ್ತೆಯಾಗಿದ್ದು, ಟಿಕ್ ಟಾಕ್ ಬಳಕೆದಾರರ ಪ್ರೊಫೈಲ್ ಕಾಣಿಸುವ ಅರೆಬೆತ್ತಲೆ ಮತ್ತು ನಗ್ನತೆ ವಿಜೃಂಭಿಸುವ ದೃಶ್ಯಗಳನ್ನು ಹೊಂದಿರುವ ಖಾತೆಗಳನ್ನು ನೀವು ಪ್ರವೇಶ ಮಾಡಿದರೆ ಅದು ನೇರವಾಗಿ ನಿಮ್ಮನ್ನು ವಯಸ್ಕರ ವಿಡಿಯೋಗಳ ವೆಬ್ ಸೈಟ್ ಗೆ ಕರೆದೊಯ್ಯುತ್ತದೆ. ಈ ವೆಬ್ ಸೈಟ್ ನಲ್ಲಿ ಆಫರ್ ಹೆಸರಿನಲ್ಲಿ ನಿಮ್ಮನ್ನು ಸೈನ್ ಅಪ್ ಮಾಡಿಸಿಕೊಳ್ಳಲಾಗುತ್ತದೆ. ರಿಜಿಸ್ಟರ್ ಮಾಡಿಕೊಂಡ ಬಳಿಕ, ಪ್ಯಾಕೇಜ್ ಹೆಸರಿನಲ್ಲಿ ಹಣ ಪೀಕಲಾಗುತ್ತದೆ. ಟಿಕ್ ಟಾಕ್ ನಲ್ಲಿ ನೂರಾರು ನಕಲಿ ಖಾತೆಗಳಿದ್ದು, ಅಲ್ಲಿ ಇನ್ ಸ್ಟಾಗ್ರಾಂ ಮತ್ತು ಸ್ಕ್ಯಾಪ್ ಚಾಟ್ ನಿಂದ ಕದ್ದಿರುವ ಪೋಟೋ ಬಳಸಿ, ಹೊಸ ಖಾತೆ ರಚಿಸಿ ಅದರ ಮೂಲಕ ಬಳಕೆದಾರರನ್ನು ಸೆಳೆಯಲಾಗುತ್ತದೆ. ಒಟ್ಟಿನಲ್ಲಿ ಈ ಟಿಕ್ ಟಾಕ್ ಇಂದ ಏನೇನೋ ಆಗುತ್ತದೋ ಗೊತ್ತಿಲ್ಲ… ಈಗಾಗಲೇ ಈ ಟಿಕ್ ಟಾಕ್ ನಿಮದ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ.. ಇನ್ನೂ ಮುಂದೆ ಯಾವ ಯಾವ ರೀತಿಯ ಅನಾಹುತಗಳು ಆಗುತ್ತವೆಯೋ ಗೊತ್ತಿಲ್ಲ..
Comments