ಜಗತ್ತೆ ಬೆಚ್ಚಿ ಬೀಳಿಸುವ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು..!!

13 Aug 2019 9:51 AM | General
3786 Report

ಸದ್ಯ ಈಗ  ಎಲ್ಲಾ ಕಡೆಗಳಲ್ಲಿಯೂ ಮಳೆಯ ಪ್ರವಾಹ ಹೆಚ್ಚಾಗಿದೆ… ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಾಕಷ್ಟು ಪ್ರದೇಶಗಳು ಮಳೆ ನೀರಿನಿಂದಾಗಿ ಜಲಾವೃತಗೊಂಡಿದೆ.. ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ.. ಹೀಗಿರುವಾಗ ಕೋಡಿಮಠದ ಸ್ವಾಮೀನಿ ಭವಿಷ್ಯವನ್ನು ನುಡಿದಿದ್ದಾರೆ.. ಈ ಸಂವತ್ಸರದಲ್ಲಿ ಜಲ ಆಘಾತ ಆಗಿದೆ. ಶ್ರಾವಣ ಮಾಸದ ಕೊನೆಯವರೆಗೂ ಮತ್ತು ಕಾರ್ತಿಕ ಮಾಸದ ನಡುವೆಯೂ ಆಗಾಗ ಪ್ರವಾಹ ಬರುವ ಸಂಭವವಿದೆ ಎಂದು ಕೋಡಿಮಠದ ಜಗದ್ಗುರು ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ಬಾಗಲಕೋಟೆಯ ಪ್ರವಾಹ ಪೀಡಿತ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮುಂದಿನ 3 ತಿಂಗಳವರೆಗೆ ಜಲ ಕಂಟಕ ಇದೆ. ಇದೇ ತಿಂಗಳಲ್ಲಿ ಮತ್ತೊಂದು ಭೀಕರ ಪ್ರವಾಹ ಬರುತ್ತದೆ. ಇನ್ನೆರಡು ತಿಂಗಳ ಬಳಿಕ ಬರುವ ಕಾರ್ತಿಕ ಮಾಸದವರೆಗೂ ಈ ಜಲಭಾದೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ಈ ಬಾರಿ ಮಳೆಯಿಂದಾಗಿ ಸಾಕಷ್ಟು ನಷ್ಟವಾಗಿದೆ… ಈ ವರ್ಷ ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತಗಳು ಸಂಭವಿಸುತ್ತವೆ. ಈಗ ಜಲ ಆಘಾತವಾಗುತ್ತಿದೆ. ಮುಂದಿನ ದಿನಗಗಳಲ್ಲಿ ಭೂ ಆಘಾತಗಳಾಗುತ್ತವೆ. ಭೂಮಿ ನಡುಗುವುದು, ಭೂಕುಸಿತವಾಗುವುದು ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಕುಸಿಯುವುದು ಸಂಭವಿಸುತ್ತದೆ. ಅಷ್ಟೆ ಅಲ್ಲದೆ ಜಗತ್ತು ಎಂದು ಕಾಣದ ವಾಯು ಆಘಾತವೊಂದು ಆಗುವ ಲಕ್ಷಣ ಇದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇನ್ನೂ ನಾನಾ ರೀತಿಯ ತೊಂದರೆಗಳು ಆಗುತ್ತವೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

 

Edited By

Manjula M

Reported By

Manjula M

Comments