ನಿಖಿಲ್ ಕುಮಾರಸ್ವಾಮಿಯ ಮಹತ್ತರ ನಿರ್ಧಾರ ..!! ಏನ್ ಗೊತ್ತಾ..?
ಸದ್ಯ ಕುರುಕ್ಷೇತ್ರ ಸಿನಿಮಾದ ಹಾವಳಿ ಒಂದು ಕಡೆ ಆದರೆ ಮತ್ತೊಂದು ಕಡೆ ಉತ್ತರ ಕರ್ನಾಟಕದ ನೆರೆಸಂತ್ರಸ್ತರು ಬದುಕು ಮೂರಾ ಬಟ್ಟೆಯಾಗಿದೆ.. ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ.. ಇದರಿಂದ ಜನರ ಬದುಕು ಹೇಳ ತೀರದಾಗಿದೆ. ಇದೀಗ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿರುವ ನಿಖಿಲ್ ಆ ಸಿನಿಮಾದಿಂದ ಬರುವ ಸಂಭಾವನೆಯನ್ನು ನೆರೆ ಪರಿಹಾರಕ್ಕೆ ನೀಡುವುದಾಗಿ ನಟ ನಿಖಿಲ್ ತಿಳಿಸಿದ್ದಾರೆ.
ಮಂಡ್ಯ ಲೋಕಸಭಾ ಅಖಾಡದಿಂದ ಸೋತ ನಿಖಿಲ್ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.. ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಹುಬ್ಬಳ್ಳಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಪ್ರವಾಹಕ್ಕೆ ಉತ್ತರ ಕರ್ನಾಟಕದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಾನು ಇವತ್ತು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ನಮ್ಮ ಪಕ್ಷದಿಂದ ಜನರಿಗೆ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದರು.ಒಟ್ಟಾರೆಯಾಗಿ ಸೋತ ಜಾಗದಲ್ಲಿಯೇ ಮತ್ತೆ ಗೆಲ್ಲುತ್ತೇನೆ ಎಂದ ನಿಖಿಲ್ ಗೆ ಇವೆಲ್ಲಾ ಫ್ಲಸ್ ಪಾಯಿಂಟ್ ಆಗೋದ್ರಲ್ಲಿ ನೋ ಡೌಟ್..!!
Comments