ವರಮಹಾಲಕ್ಷ್ಮೀ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್ : ಗಗನಕ್ಕೇರಿದ ಹೂವು ಹಣ್ಣಿನ ಬೆಲೆ

08 Aug 2019 10:04 AM | General
315 Report

ಸದ್ಯ ಆಷಾಡ ಕಳೆದು ಶ್ರಾವಣ ಪ್ರಾರಂಭವಾಗಿದೆ..ಶ್ರಾವಣದ ಮೊದಲ ಹಬ್ಬಕ್ಕೆ ಎಲ್ಲರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.. ಸದ್ಯ ಹಿಂದೂಗಳು ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದಾರೆ.. ಆದರೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹೂ, ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿದೆ. ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ.

ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ,ವಿಜಯನಗರ, ಜಯನಗರ, ಯಶವಂತಪುರ, ಗಾಂಧಿಬಜಾರ್ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಹಬ್ಬಕ್ಕೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಆಗಮಿಸಿದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಮುಟ್ಟಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ದಿಢೀರ್ ಹೂವಿನ ದರ ಏರಿಕೆಗೆ ರಾಜ್ಯದಲ್ಲಿ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ ಹಾಗೂ ಮಾರುಕಟ್ಟೆಗೆ ಹೂವು ಕಡಿಮೆ ಬಂದಿರುವ ಕಾರಣ ಬೆಲೆ ಏರಿಕೆಯಾಗಿದೆ. ಮಲ್ಲಿಗೆ ಮೊಗ್ಗು ಕೆಜಿಗೆ 700-800 ರೂ. ಕನಕಾಂಬರ 1400 ರೂ, ಸೇವಂತಿ 500-600 ರೂ. ಸುಗಂಧ ರಾಜ 150 ರೂ. ಗುಲಾಬಿ 250 ರೂ. ದರವಿದೆ.ಇನ್ನು ಕೆಜಿ ಸೇಬು 150-200 ರೂ. ಮೊಸಂಬಿ 90-110 ರೂ. ಪಚ್ಚಬಾಳೆ 30-35, ಏಲಕ್ಕಿ ಬಾಳೆ 100 ಹಾಗೂ ದಾಳಿಂಬೆ 180 ರೂ. ಬೆಲೆಯಿದೆ. ಒಟ್ಟಾರೆಯಾಗಿ ಬೆಲೆ ಎಷ್ಟೆ ಜಾಸ್ತಿಯಾದರೂ ಹಬ್ಬ ಮಾಡಲೇಬೇಕು ಎನ್ನುವ ಜನ ಬೆಲೆ ಎಷ್ಟಾದರೂ ಹಬ್ಬ ಮಾಡುತ್ತಾರೆ..

Edited By

Manjula M

Reported By

Manjula M

Comments