ಮಳೆಯ ಹಿನ್ನಲೆ: ಬಾಗಲಕೋಟೆ ಶಾಲಾ-ಕಾಲೇಜುಗಳಿಗೆ ಮತ್ತೆರಡು ದಿನ ರಜೆ ಘೋಷಣೆ

08 Aug 2019 9:12 AM | General
265 Report

ಸದ್ಯ ರಾಜ್ಯದೆಲ್ಲೆಡೆ ಮಳೆರಾಯನ ಆರ್ಭಟ ಜೋರಾಗಿಯೇ ಇದೆ... ಕಳೆದ ಒಂದುವಾರದಿಂದಲೂ ಕೂಡ ಮಳೆ ಹೆಚ್ಚಾಗಿದೆ.. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಜೋರು ಮಳೆಯಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿದೆ.. ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಎಲ್ಲರು ಮಳೆಯಿಂದಾಗಿ ಪರದಾಡುವಂತಾಗಿದೆ..ಹೀಗಾಗಿ ಅಲ್ಲಿನ ಶಾಲಾ- ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು.

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಬಾಗಲಕೋಟೆ ಶಾಲೆಗಳಿಗೆ ಮತ್ತೆ ಎರಡು ದಿನ ರಜೆಯನ್ನು ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ತತ್ತರಿಸಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಬಾಗಲಕೋಟೆ ಡಿ.ಸಿ ಆರ್ ರಾಮಚಂದ್ರನ್ ರಜೆ ಘೋಷಿಸಿ ಆದೇಶ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಮಳೆರಾಯನ ಆರ್ಭಟ ಜೋರಾಗಿದ್ದು ಸಾಕಷ್ಟು ಹಾನಿಗಳಿಗಳಾಗಿವೆ..ಮನೆಗಳಿಗೆಲ್ಲಾ ನೀರು ನುಗ್ಗಿವೆ.. ಜಿಲ್ಲಾಧಿಕಾರಿಗಳು ಆಯಾ ಸ್ಥಳಕ್ಕೆ ಭೇಟಿ ನೀಡಿ ಬೇಕಾದ ರಕ್ಷಣಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments