ಹೀಗೂ ಉಂಟಾ..? ವೆಬ್ ಸೈಟ್ ನಲ್ಲಿ ಲವ್ವರ್’ನೇ ಹರಾಜಿಗಿಟ್ಟ ಭೂಪ..!!

06 Aug 2019 5:39 PM | General
340 Report

ಸಾಮಾನ್ಯವಾಗಿ ನಮ್ಮಕಡೆ ಯಾವ ರೀತಿ ವಸ್ತುಗಳನ್ನು ಹರಾಜಿಗೆ ಇಡ್ತಾರೆ ಹೇಳಿ… ಕುರಿನೋ ಕೋಳಿನೋ ಅಥವಾ ಮನೆ, ಜಮೀನು, ಪುರಾತನ ವಸ್ತುಗಳನ್ನು ಹರಾಜಿಗೆ ಇಡ್ತಾರೆ.. ಆದರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಲವರ್ ನೆ ಹರಾಜಿಗಿಡೋದಾ.. ಕೊಲ್ ಚೆಸ್ಟರ್ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಎಪ್ಪತ್ತು ಸಾವಿರ ಪೌಂಡ್ ಗೆ ಹರಾಜಿಗಿಟ್ಟಿದ್ದಾನೆ.. ಎಂತ ಕಾಮಿಡಿ ಅಲ್ವ…

ಡೇಲ್​​ ಲೀಕ್ಸ್ ಎಂಬಾತ ತನ್ನ ಪ್ರೇಯಸಿ ಕೆಲ್ಲಿ ಗ್ರೀವ್ಸ್​ ಅನ್ನು ಇಬೇ ವೆಬ್​​ಸೈಟ್​ನಲ್ಲಿ ಹರಾಜಿಗಿಟ್ಟಿದ್ದಾನೆ. ಇತ ಹರಾಜಿಟ್ಟ 24 ಗಂಟೆಯಲ್ಲಿ 81 ಸಾವಿರ ಮಂದಿ ವೀಕ್ಷಣೆ ಮಾಡಿದ್ದು ಅನೇಕರು ಬಿಡ್ಡಿಂಗ್ ಕೂಡ ನಡೆಸಿದ್ದಾರೆ. ಈ ವಿಚಾರ ತಿಳಿದ ಪ್ರೇಯಸಿ ಕೆಲ್ಲಿ ಗ್ರೀವ್ಸ್​ ಮಾತ್ರ ಕೋಪಗೊಳ್ಳುವ ಬದಲು ನಕ್ಕು ಸುಮ್ಮನಾಗಿದ್ದಾಳಂತೆ. ಆದರೆ ಇಬೆ ವೆಬ್ ಸೈಟ್ ಮಾತ್ರ ಇಲ್ಲಿ ಮನುಷ್ಯರನ್ನು ಮಾರಲು ಅವಕಾಶವಿಲ್ಲವೆಂದು ಜಾಹೀರಾತನ್ನು ಡಿಲೀಟ್ ಮಾಡಿದೆ. ಏನೆ ಆದರೂ ಕೂಡ ಲವರ್ ನ ಹರಾಜಿಗೆ ಇಡೋದು ಅಂದ್ರೆ ಸುಮ್ನೆನಾ…?

Edited By

Manjula M

Reported By

Manjula M

Comments