ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯುವತಿ-ಯುವಕರ ಟಿಕ್ ಟಾಕ್…!!

06 Aug 2019 2:22 PM | General
336 Report

ಅಂದಹಾಗೆ ಇತ್ತಿಚಿಗೆ ಫೇಮಸ್ ಆಗಿರುವ ಆ್ಯಪ್ ಗಳಲ್ಲಿ  ಟಿಕ್ ಟಾಕ್ ಕೂಡ ಒಂದು.. ಟಿಕ್ ಟಾಕ್ ಅಂತೂ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. ಆಗ ತಾನೇ ಹುಟ್ಟುವ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರು ಕೂಡ ಟಿಕ್ ಟಾಕ್ ನಲ್ಲಿ ಸೆಲಬ್ರೆಟಿಯಾಗಿ ಬಿಡುತ್ತಾರೆ. ಕೈಯಲ್ಲೊಂದು ಅಂಡ್ರ್ಯಾಯ್ಡ್ ಮೊಬೈಲ್ ಇದ್ರೆ ಸಾಕು.. ಟಿಕ್ ಟಾಕ್ ಆ್ಯಪ್ ಆ ಪೋನಿನಲ್ಲಿ ಇದ್ದೆ ಇರುತ್ತದೆ.. ಟಿಕ್ ಟಾಕ್ ಆ್ಯಪ್ನಿಂದ ಸಾಕಷ್ಟು ಕಲಾವಿದರು ತಮ್ಮತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಇದರಿಂದ ಸಾಕಷ್ಟು ಅನಾಹುತಗಳು ನಡೆದಿವೆ ಎನ್ನಬಹುದು.. ಟಿಕ್ ಟಾಕ್ ಮಾಡುವಾಗ ಪ್ರಾಣವನ್ನೆ ಕಳೆದುಕೊಂಡಿರುವ ಘಟನೆಗಳು ನಡೆದುಹೋಗಿವೆ.

ಮಹಾರಾಷ್ಟ್ರದಲ್ಲಿ ಮಳೆರಾಯನ ಆರ್ಭಟಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆಲ ಯುವಕ-ಯುವತಿಯರು ಟಿಕ್ ಟಾಕ್ ವಿಡಿಯೋಗಾಗಿ ಅಪಾಯಕಾರಿ ಸಾಹಸ ಮಾಡುತ್ತಿದ್ದಾರೆ. ಹೌದು, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ತಟದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆಯೂ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಯುವಕ-ಯುವತಿಯರ ಹುಚ್ಚಾಟ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿಂದ ನದಿಗೆ ಜಿಗಿದು ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಒಟ್ಟಿನಲ್ಲಿ ಟಿಕ್ ಆ್ಯಪ್ ಅನ್ನು ಬ್ಯಾನ್ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರೂ ಇನ್ನು ಕೂಡ ಅದಕ್ಕೆ ಫಲ ಸಿಕ್ಕಿಲ್ಲ..

Edited By

Manjula M

Reported By

Manjula M

Comments