ಪತ್ನಿಯನ್ನೇ ಜೂಜಿನಲ್ಲಿ ಪಣಕ್ಕಿಟ್ಟು ಸೋತ ಪತಿ..!! ಮುಂದೇನಾಯ್ತು..?

02 Aug 2019 5:03 PM | General
309 Report

ಹೆಣ್ಣಿಗೆ ಹಠ ಇರಬಾರದು ಗಂಡಿಗೆ ಚಟ ಇರಬಾರದು ಅಂತ ಹೇಳೋದನ್ನ ಎಲ್ಲರೂ ಕೂಡ ಸಾಮಾನ್ಯವಾಗಿ ಕೇಳಿಯೇ ಇರುತ್ತಾರೆ.. ಗಂಡು ಚಟಕ್ಕೆ ಒಳಗಾದರೆ ಮುಗಿತು.. ಅನಾಹುತ ಕಟ್ಟಿಟ್ಟ ಬುತ್ತಿ…ಅದೇ ರೀತಿಯ ಘಟನೆಯೊಂದು ಜೈಪುರದಲ್ಲಿ ನಡೆದಿದೆ.. ಜೂಜು ಮತ್ತು ಕುಡಿತ ಒಟ್ಟಿಗೆ ಸೇರಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ..!

ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ವ್ಯಕ್ತಿ ಜೂಜಾಟದಲ್ಲಿ ಹಣವನ್ನೆಲ್ಲಾ ಕಳೆದುಕೊಂಡು ಕೊನೆಗೆ ಪತ್ನಿಯನ್ನೇ ಪಣಕ್ಕಿಟ್ಟು ಸೋತು ಬಿಟ್ಟಿದ್ದಾನೆ..ನಂತರ  ಗೆದ್ದ ಸ್ನೇಹಿತರು ಆತನ ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.  ಸಂತ್ರಸ್ತೆ ದೂರು ಕೊಡಲು ಪೊಲೀಸರ ಬಳಿ ಹೋದಾಗ ದೂರ ಸ್ವೀಕರಿಸಲು ನಿರಾಕರಿಸಿದ್ದರು. ತದ ನಂತರ ಆಕೆ ಕೋರ್ಟ್ ಮೊರೆ ಹೋಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.. ಕೋರ್ಟ್ ಆದೇಶದ ನಂತರ ಜೌನ್ ಪುರ್ ಜಿಲ್ಲೆಯ ಜಾಫರ್ ಬಾದ್ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಒಟ್ಟಿನಲ್ಲಿ ಕುಡಿತಕ್ಕೆ ಮತ್ತು ಜೂಜಿಗೆ ದಾಸನಾಗಿ ಬಿಟ್ಟರೆ ಏನು ಬೇಕಾದರೂ ಕೂಡ ಮಾಡಲು ಸಿದ್ದ ಎಂಬುದು ಸತ್ಯಕ್ಕೆ ಹತ್ತಿರವಾದ ಮಾತು…

Edited By

Manjula M

Reported By

Manjula M

Comments