ಬೈಕ್ ಸವಾರರಿಗೊಂದು ಶಾಕಿಂಗ್ ಸುದ್ದಿ..!!
ಇತ್ತಿಚಿಗೆ ರಸ್ತೆ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ… ಅದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯು ಸಾಕಷ್ಟು ಪ್ರಯತ್ನವನ್ನು ಮಾಡುತ್ತಲೆ ಇದೆ.. ದಿನನಿತ್ಯ ಸಾಕಷ್ಟು ಅಪಘಾತಗಳು ನಡೆಯಯತ್ತಲೆ ಇರುತ್ತವೆ.. ಅದನ್ನು ತಡೆಗಟ್ಟಲು ಪ್ರಯತ್ನವನ್ನು ಮಾಡುತ್ತಲೇ ಇದೆ.. ಇದೀಗ ವಾಹನ ಸವಾರರ ಮತ್ತು ರಸ್ತೆ ಸುರಕ್ಷತೆ ಉದ್ದೇಶದಿಂದ ಪೊಲೀಸ್ ಇಲಾಖೆಯು ಹೊಸ ಕ್ರಮಕ್ಕೆ ಮುಂದಾಗಿದೆ.. ಅತೀ ಶೀಘ್ರದಲ್ಲಿಯೇ ಆಫ್ ಹೆಲ್ಮೆಟ್ ಅನ್ನು ಬ್ಯಾನ್ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಮೋಟಾರು ವಾಹನ ಕಾಯ್ದೆ 1988 ಕಲಂ 129ರ ಪ್ರಕಾರ ದ್ವಿಚಕ್ರ ವಾಹನಸವಾರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.. ಈ ನಿಟ್ಟಿನಲ್ಲಿ ನಗರದಲ್ಲಿ ಕಳೆದ 10 ವರ್ಷಗಳಿಂದಲೂ ಕೂಡ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಜಾರಿಗೊಳಿಸಲಾಗಿದೆ. ವಾಹನ ಸವಾರರು ಮಾತ್ರ ಸುರಕ್ಷತವಲ್ಲದ ಅರ್ಧ ತಲೆಯ ಹೆಲ್ಮೆಟ್ ಧರಿಸುತ್ತಿರುವುದರಿಂದ ಅಪಘಾತಗಳು ಆದಾಗ ಹೆಚ್ಚು ಗಾಯಗಳಾಗುತ್ತಿವೆ. ಹೀಗಾಗಿ ಶೀಘ್ರವೇ ಅರ್ಧತಲೆಯ ಹೆಲ್ಮೆಟ್ ಬ್ಯಾನ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಅರ್ಧತಲೆಯ ಹೆಲ್ಮೆಟ್ ನಿಷೇಧ ಸಂಬಂಧ ಸರ್ಕಾರದ ಗಮನಕ್ಕೆ ತಂದಿರುವ ಪೊಲೀಸ್ ಇಲಾಖೆ ಶೀಘ್ರವೇ ಸರ್ಕಾರದ ಅನುಮತಿ ಪಡೆದು ಅರ್ಧತಲೆಯ ಹೆಲ್ಮೆಟ್ ಬ್ಯಾನ್ ಮಾಡಲಿದೆ ಎನ್ನಲಾಗಿದೆ.. ಹೆಲ್ಮೆಟ್ ಹಾಕಲಿಲ್ಲ ಅಂದರೆ ಅದಕ್ಕೂ ದಂಡ .. ಹೀಗೆ ಸಾಕಷ್ಟು ದಂಡವನ್ನು ಪಾವತಿಸಬೇಕಿತ್ತು.. ಇದೀಗ ದಂಡದ ಶುಲ್ಕದಲ್ಲಿಯೂ ಕೂಡ ಹೆಚ್ಚಳ ಮಾಡಲಾಗಿದೆ.
Comments