ರಸ್ತೆ ಅಪಘಾತ..!! ಪ್ರಾಣಾಪಾಯದಿಂದ ಪಾರಾದ  ಸ್ಯಾಂಡಲ್’ವುಡ್ ನ ಕೊರಿಯೋಗ್ರಾಫರ್..!!!

23 Jul 2019 5:00 PM | General
462 Report

ಚಂದನವನದ ಖ್ಯಾತ ಕೊರಿಯೋಗ್ರಾಪರ್ ಚಲಿಸುತ್ತಿದ್ದ ಕಾರು ಅಪಘಾತವಾಗಿದೆ.. ಸದ್ಯ ಕಾರಿನಲ್ಲಿ ಚಲಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಖ್ಯಾತ ಕೊರಿಯೋಗ್ರಾಫರ್ ಆದ ಮಾಲೂರು ಶ್ರೀನಿವಾಸ್ ಕಾರು ಅಪಘಾತವಾಗಿದೆ.. ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗಿ ಬರುವಾಗ ಈ ಘಟನೆ ಸಂಭವಿಸಿದೆ. ಪತ್ನಿ ಸೇರಿದಂತೆ ನಾಲ್ಕು ಮಂದಿ ಗೆಳೆಯರ ಜೊತೆ ತಿರುಪತಿಗೆ ತೆರಳಿದ್ದ ಮಾಲೂರು, ಇನೋವಾ ಕಾರಿನಲ್ಲಿ ಬೆಂಗಳೂರಿಗೆ ಬರುವಾಗ ಈ ಘಟನೆ ನಡೆದಿದೆ.

ಬೆಂಗಳೂರು- ಕೋಲಾರ ಹೈವೇನಲ್ಲಿ ಹೊಸಕೋಟೆಯ ಎಂವಿಜೆ ಕಾಲೇಜಿನ ಬಳಿ ಮಾಲೂರು ಶ್ರೀನಿವಾಸ್ ಇದ್ದ ಇನೋವ ಕಾರ್ ಅಪಘಾತಕ್ಕೀಡಾಗಿದೆ. ಮುಂದೆ ಹೋಗ್ತಿದ್ದ ದ್ವಿಚಕ್ರ ವಾಹನ ಸವಾರ ಸಡನ್ ಆಗಿ ಬಲಕ್ಕೆ ತಿರುಗಿಸಿದಾಗ, ಆತನನ್ನ ಅವಾಯ್ಡ್ ಮಾಡಲು ಹೋದ ಮಾಲೂರು ಶ್ರೀನಿವಾಸ್ ಗೆಳೆಯನ ಕಾರ್ ಕಂಟ್ರೋಲ್ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಮಾಲೂರು ಶ್ರೀನಿವಾಸ್​ಗೆ ಮಾತ್ರ ಎಡಗಾಲು ಮುರಿದಿದ್ದು, ಹಾಸ್ಮೆಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ. ಸದ್ಯ ನಿನ್ನೆಯಷ್ಟೇ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿರೋ ಮಾಲೂರು, ವೈದ್ಯರ ನಿರ್ದೇಶನದಂತೆ ವಿಶ್ರಾಂತಿಯಲ್ಲಿದ್ದಾರೆ ತಿರುಪತಿ ತಿಮ್ಮಪ್ಪನ ಕೃಪೆಯಿಂದ ಎಲ್ಲರು ಕೂಡ ಪಾರಾಗಿದ್ದಾರೆ. ಸಿನಿರಂಗದವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀನಿವಾಸ್ ಅವರ ಆರೋಗ್ಯ ವಿಚಾರಿಸಿದ್ದಾರೆ.

Edited By

Manjula M

Reported By

Manjula M

Comments