ರಕ್ತದಲ್ಲಿ ಪತ್ರ ಬರೆದು ದಯಾಮರಣ ಕೋರಿದ ಯುವತಿಯರು ..!!

06 Jul 2019 1:54 PM | General
213 Report

ಇಬ್ಬರು ಯುವತಿಯರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ದಯಾಮರಣ ಕೋರಿ ಪತ್ರಬರೆದಿದ್ದಾರೆ. ತಮ್ಮ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣದಿಂದ ಬಜಾವ್‌ ಮಾಡಿ ಎಂದು ಪಂಜಾಬ್‌ನ ಮೋಗಾ ನಗರದ ಇಬ್ಬರು ಯುವತಿಯರು ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಇಬ್ಬರು ಯುವತಿಯರು ಬರೆದಿರುವ ರಕ್ತ ಪತ್ರದಲ್ಲಿ, ವಂಚನೆ ಪ್ರಕರಣದಲ್ಲಿ ಮೋಸದಿಂದ ತಮ್ಮನ್ನು ಸಿಲುಕಿಸಿದ್ದು, ಭಯದಿಂದ ನಾವೆಲ್ಲ ಜೀವನ ನಡೆಸುತ್ತಿದ್ದೇವೆ. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ, ನಮ್ಮ ಕುಟುಂಬಕ್ಕೆ ದಯ ಮಾಡಿ ದಯಾಮರಣ ನೀಡಿ ಎಂದು ರಾಮನಾಥ್ ಕೋವಿಂದ್ ಅವರನ್ನು ಬೇಡಿಕೊಂಡಿದ್ದಾರೆ. ನಮ್ಮ ಮೇಲೆ ಪಾರಿವಾಳ ಬಾಜಿ ಹಾಗೂ ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.. ಈ ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸಲಾಗಿದೆ ದಯವಿಟ್ಟು ಪ್ರಕರಣವನ್ನು ಸರಿಯಾಗಿ ವಿಚಾರಣೆ ನಡೆಸಿ ಎಂದು ಪೊಲೀಸರಿಗೆ ಅವಲೊತ್ತುಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ' ಎಂದು ನಿಶಾ ಕೌರ್ ಮತ್ತು ಅಮನ್ ಜೋತ್ ಕೌರ್ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments