ಇನ್ಮುಂದೆ ತಟ್ಟೆಯಲ್ಲಿ ಊಟ ಬಿಟ್ರೆ ಬೀಳುತ್ತೆ ದಂಡ..!!

06 Jul 2019 11:41 AM | General
305 Report

ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಒಂದೊತ್ತಿನ ಊಟಕ್ಕೂ ಕೂಡ ಪರದಾಡುತ್ತಿರುವುದನ್ನು ನಾವು ನೀವೆಲ್ಲ ದಿನ ನಿತ್ಯ ಕಾಣುತ್ತಲೇ ಇರುತ್ತೇವೆ.. ಆದರೆ ಮತ್ತೆ ಕೆಲವರು ಅವಶ್ಯಕತೆಗಿಂತ ಹೆಚ್ಚಿನ ಊಟವನ್ನು ಹಾಕಿಸಿಕೊಂಡು ವ್ಯರ್ಥ ಮಾಡುತ್ತಾರೆ. ಇದೀಗ ಈ ರೀತಿ ಊಟ ವ್ಯರ್ಥ ಮಾಡುವುದಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮುಂದಾಗಿದೆ.

ಫ್ಲೈಟ್ ಪ್ಲೆಜ್ ಎಂಬ ನೂತನ ನಿಯಮವನ್ನು ಜಾರಿಗೆ ತರಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಇದೀಗ ಮುಂದಾಗಿದ್ದು, ತನ್ನ ವಿದ್ಯಾರ್ಥಿಗಳು ತಟ್ಟೆಯಲ್ಲಿ ಅನ್ನ ಬಿಡುವುದಕ್ಕೆ ಇದು ಕಡಿವಾಣ ಹಾಕಲಿದೆ. ಕಳೆದ ವರ್ಷವೇ ಈ ನಿಯಮವನ್ನು ಜಾರಿಗೆ ತರಲು ನಿರ್ಧಾರ ಮಾಡಿದ್ದಾದರೂ ಅದು ಈ ಶೈಕ್ಷಣಿಕ ವರ್ಷ ಕಾರ್ಯರೂಪಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.  ಈ ನೂತನ ನಿಯಮದ ಪ್ರಕಾರ ವಿದ್ಯಾರ್ಥಿಗಳು ತಮ್ಮ ತಟ್ಟೆಯಲ್ಲಿ ಅನ್ನ ಬಿಟ್ಟರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ. ದಂಡ ಎಷ್ಟು ಎಂಬುದನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು  ನಿರ್ಧರಿಸಿಲ್ಲವಾದರೂ ಈಗಾಗಲೇ ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮನೆಯಿಂದ ಊಟ ತಂದರೆ ಮತ್ತೆ ಹಲವರು ಕ್ಯಾಂಟೀನ್ನಲ್ಲಿ ಊಟ ಮಾಡುತ್ತಾರೆ. ಪ್ಲೇಟ್ ಪ್ಲೆಜ್ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.. ಈ ರೀತಿಯ ನಿಯಮವನ್ನು ಎಲ್ಲೆಡೆ ಜಾರಿಗೆ ತಂದರೆ ಊಟ ವೇಸ್ಟ್ ಆಗುವುದಿಲ್ಲ,..

Edited By

Manjula M

Reported By

Manjula M

Comments