ಮಗು ವಿಪರೀತ ಅಳುತ್ತದೆ ಎಂದು ಪೋಷಕರೇ ಹೀಗ್ ಮಾಡೋದಾ..?

06 Jul 2019 10:26 AM | General
267 Report

ಮಕ್ಕಳು ಏನು ಮಾಡಿದರು ಚಂದ ಅಂತ ಕೆಲವರು ಹೇಳುತ್ತಾರೆ. ಅವರ ಲಾಲನೆ, ಪಾಲನೆ, ಪೋಷಣೆ ಅಂತ ಸಮಯವನ್ನು ಕಳೆಯುತ್ತಿರುತ್ತಾರೆ.. ಮಕ್ಕಳು ನಕ್ಕರು ಚಂದ, ಅತ್ತರೂ ಚಂದ ಎನ್ನುವಂತೆ ಪೋಷಕರು ಮಕ್ಕಳನ್ನು ನೋಡಿಕೊಳ್ಳುತ್ತಾರೆ.  ಆದರೆ ಮಗು ವಿಪರೀತ ಅಳುತ್ತಿತ್ತು ಅಂತ ಪೋಷಕರು ಏನು ಮಾಡಿದ್ದಾರೆ ಗೊತ್ತಾ..? ವಿಪರೀತ ಅಳುತ್ತಿದ್ದ 2 ವರ್ಷದ ಮಗುವನ್ನು ಪಾಲಕರೇ ಹೊಡೆದು ಕೊಂದಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದಲ್ಲಿ ನಡೆದಿದೆ.

ಮೂಲತಃ ಹೆಚ್.ಡಿ.ಕೋಟೆ ತಾಲೂಕಿನ ಸವ್ವೆ ಗ್ರಾಮದ ಶಶಿಕುಮಾರ್ ಮತ್ತು ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಖುಷಿ (4) ಮತ್ತು ಕುಶಾಲ್ (2) ಎಂಬ ಇಬ್ಬರು ಮಕ್ಕಳಿದ್ದರು. ಕುಶಾಲ್ ಹುಟ್ಟಿದ ದಿನದಿಂದಲೂ ಈ ಮಗು ನನ್ನದಲ್ಲ ಎಂದು ಶಶಿಕುಮಾರ್ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಜೊತೆಗೆ ಮಗುವಿಗೆ ಹೊಡೆಯುತ್ತಿದ್ದ ಎಂದು ಹೇಳಲಾಗುತ್ತಿದೆ. ಜೂನ್ 30 ರಂದು ರಾತ್ರಿ ಅಳುತ್ತಿದ್ದ ಮಗುವಿಗೆ ದಂಪತಿ ಹೊಡೆದಿದ್ದಾರೆ. ಥಳಿತಕ್ಕೊಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ದಂಪತಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಜುಲೈ 3 ರಂದು ಮೃತಪಟ್ಟಿದೆ. ಮಗುವನ್ನು ಪಾಲಕರೇ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಏನೇ ಆದರೂ ಮಕ್ಕಳು ಇಲ್ಲದವರು ಮಕ್ಕಳಿಗಾಗಿ ಏನೇನೋ ಮಾಡುತ್ತಾರೋ, ಮಕ್ಕಳಿರುವವರು ಈ ರೀತಿ ಮಾಡುತ್ತಾರೆ.

Edited By

Manjula M

Reported By

Manjula M

Comments