ಈ ಬಾರಿಯಷ್ಟು ಕೆಟ್ಟ ಬಜೆಟ್ ಅನ್ನು ನಾನು ಯಾವತ್ತು ನೋಡಿಲ್ಲ:- ಡಿಸಿಎಂ

05 Jul 2019 5:53 PM | General
376 Report

ಇಂದು ಮೋದಿ ಸರ್ಕಾರವು ಬಜೆಟ್ ಮಂಡನೆಯಾಗಿದೆ.....ಮೋದಿ ಸರ್ಕಾರ ಈ ಬಾರಿ ಕೆಟ್ಟ ಬಜೆಟ್ ಮಂಡನೆ ಮಾಡಿದ್ದಾರೆ, ಯಾವ ಕ್ಷೇತ್ರಕ್ಕೂ ಆದ್ಯತೆ ನೀಡದೆ ನೀರಸ ಬಜೆಟ್‌ನನ್ನು ಮಂಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಟೀಕಿಸಿದ್ದಾರೆ… ಕೇಂದ್ರ ಸರ್ಕಾರದ ಬಜೆಟ್ ಕುರಿತು ಸದಾಶಿವ ನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದರು.. ನಮ್ಮ ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮ್‌ ಅವರು ಅತ್ಯಂತ ಕೆಟ್ಟ ಬಜೆಟ್‌ ಮಂಡಿಸಿದ್ದಾರೆ. ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ನಿರೀಕ್ಷೆಯಂತೆ ಯಾವುದು ಇಲ್ಲ..

ಲೋಕಸಭಾ ಚುನಾವಣೆಯ ಸಂದರ್ಭದ ಹೊತ್ತಿನಲ್ಲಿ  ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಅದಕ್ಕಾಗಿ ಜನಸಾಮಾನ್ಯರು ಸಹ ಅವರಿಗೆ ಎರಡನೇ ಬಾರಿ ಆಡಳಿತ ನಡೆಸಲು ಅವಕಾಶ ಕೊಟ್ಟರು.. ಆದರೆ ಯಾವುದು ಅಂದುಕೊಂಡಂತೆ ಆಗಲಿಲ್ಲ.. . ಜನರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿ ಮಾಡಿದ್ದಾರೆ ಎಂದು ತಿಳಿಸಿದರು.  ಇಷ್ಟು ವರ್ಷದ ಕೇಂದ್ರದ ಆಡಳಿತದಲ್ಲಿ ಇಷ್ಟು ಕೆಟ್ಟ ಬಜೆಟ್‌ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ತಿಳಿಸಿದರು.  ಈ ಬಾರಿ ಬಜೆಟ್‌ ಗಾತ್ರ ಕಳೆದ ವರ್ಷಕ್ಕಿಂತ ಕೇವಲ 3 ಲಕ್ಷ ಕೋಟಿ ರು. ಹೆಚ್ಚಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಏನೂ ಆದ್ಯತೆ ನೀಡಿಲ್ಲ. ರೈತರು ಈ ದೇಶದ ಬೆನ್ನೆಲುಬು. ಅವರಿಗೂ ಯಾವ ಹೊಸ ಯೋಜನೆಯನ್ನೂ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು.. ಜನರ ಭರವಸೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದರು.

 

 

Edited By

Manjula M

Reported By

Manjula M

Comments