ಉನ್ನತ ಶಿಕ್ಷಣಕ್ಕೆ  ಹೆಚ್ಚು ಮಹತ್ವ ಕೊಟ್ಟ ಕೇಂದ್ರ ಬಜೆಟ್..!!

05 Jul 2019 1:14 PM | General
414 Report

ಕೇಂದ್ರ ಸರ್ಕಾರದ ಬಜೆಟ್ ಸದ್ಯ ಎಲ್ಲರ ಗಮನವನ್ನು ಸೆಳೆದಿದೆ…ನಿರ್ಮಲಾ ಸೀತರಾಮನ್ ಮಂಡಿಸುತ್ತಿರುವ ಈ ಬಜೆಟ್ ಸದ್ಯ ಕುತೂಹಲ ಕೆರಳಿಸಿದೆ.  ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.  ಅಂತರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ ಮಾಡುವುದಾಗಿ ತಿಳಿಸಿದೆ.. ಕೇಂದ್ರ ಬಜೆಟ್ ನಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತರುವುದಾಗಿಯೂ ಸರ್ಕಾರ ತಿಳಿಸಿದೆ..

ಉನ್ನತ ಶಿಕ್ಷಣಕ್ಕೂ ಕೂಡ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿಯೇ ಸರ್ಕಾರ 400 ಕೋಟಿ ಮೀಸಲಿಟ್ಟಿದೆ. ವಿಶ್ವದ ಅಗ್ರ 200 ಕಾಲೇಜುಗಳ ಪಟ್ಟಿಯಲ್ಲಿ ಭಾರತದ ಮೂರು ಕಾಲೇಜುಗಳ ಹೆಸರಿದೆ. ಇದನ್ನು ಹೆಚ್ಚಿಸುವುದು ಸರ್ಕಾರದ ಗುರಿ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆನ್ಲೈನ್ ಕೋರ್ಸ್ ಗಳನ್ನು ಉತ್ತೇಜಿಸುವುದು ನಮ್ಮ ಗುರಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದಲ್ಲಿ ಅಧ್ಯಯನ  ಕಾರ್ಯಕ್ರಮವನ್ನು ಆರಂಭ ಮಾಡಲಾಗುವುದು… ಎಂದು ತಿಳಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಹಿಳಾ ಸಂಘಗಳ ಸದಸ್ಯರಿಗೂ ಕೂಡ ಬಂಪರ್ ಸುದ್ದಿಯನ್ನು ನೀಡಿದ್ದಾರೆ. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿ ಸಾಲ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.  

Edited By

Manjula M

Reported By

Manjula M

Comments