3 ವರ್ಷದ ಹಿಂದೆ ಕಳೆದುಹೋದ ಗಂಡನನ್ನು ಟಿಕ್​ಟಾಕ್​ನಲ್ಲಿ ಹುಡುಕಿದ ಪತ್ನಿ..!!

03 Jul 2019 6:01 PM | General
233 Report

ಸದ್ಯ ಟ್ರೆಂಡಿಂಗ್ ನಲ್ಲಿರುವ ಆ್ಯಫ್ ಗಳಲ್ಲಿ ಟಿಕ್ ಟಾಕ್ ಕೂಡ ಒಂದು.. ಈ ಟಿಕ್ ಟಾಕ್  ಆ್ಯಪ್ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ.. ಮಾಡೋ ಕೆಲಸವನ್ನು ಬಿಟ್ಟು ಟಿಕ್ ಟಾಕ್ ಮಾಡುತ್ತಾ ಕುಳಿತು ಬಿಡುತ್ತಾರೆ.. ಈ ಆ್ಯಪ್ ನಿಂದ ಸಾಕಷ್ಟು ಕಲಾವಿದರು ಕೂಡ ಬೆಳಕಿಗೆ ಬಂದಿದ್ದಾರೆ. ರಸ್ತೆಯಲ್ಲಿ, ಬೈಕ್ ನಲ್ಲಿ, ಕುಂತರು, ನಿಂತರೂ ಕೂಡ ಟಿಕ್ ಟಾಕ್ ನದೇ ಹವಾ ಆಗೇ ಆಗಿ ಬಿಟ್ಟಿದೆ.. ಇತ್ತಿಚಿಗೆ ಟಿಕ್ ಟಾಕ್ ಮಾಡುತ್ತಲೇ ವಿಷ ಕುಡಿದು ಪ್ರಾಣ ಬಿಟ್ಟವರನ್ನು ನಾವು ನೋಡಿದ್ದೆವು, ಮೊನ್ನೆ ಮೊನ್ನೆಯಷ್ಟೆ ಟಿಕ್ ಟಾಕ್ ಮಾಡಲು ಹೋಗಿ ಬೆನ್ನು ಮೂಳೆ ಮುರಿದುಕೊಂಡವರನ್ನು ಕೂಡ ನೋಡಿದ್ದೇವೆ.. ಇದೀಗ ಇದೇ ಟಿಕ್ ಟಾಕ್ ಬೇರೆಯಾಗಿದ್ದ ಕುಟುಂಬವನ್ನು ಒಂದು ಮಾಡಿದೆ.

ಹೌದು.. ಆತನ ಹೆಸರು ಸುರೇಶ್…. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವನಾದ ಸುರೇಶ್ ಜಯಪ್ರದ ಎಂಬುವವರನ್ನು ವಿವಾಹವಾಗಿದ್ದನು.. ಈತನಿಗೆ ಮಗು ಕೂಡ ಇದೆ.. ಆದರೆ ಸುರೇಶ್  2016ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದನು ಎಷ್ಟು ದಿನವಾದರೂ ಗಂಡ ಮನೆಗೆ ಹಿಂದಿರುಗದಿದ್ದರಿಂದ ಆತಂಕಕ್ಕೆ ಈಡಾಗಿದ್ದ ಜಯಪ್ರದ ಆತನ ಗೆಳೆಯರು ಹಾಗೂ ಕುಟುಂಬಸ್ಥರನ್ನೆಲ್ಲಾ ಕೇಳಿದ್ದಾರೆ, ಗಂಡ ಎಲ್ಲೂ ಪತ್ತೆಯಾಗದಿದ್ದರಿಂದ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಕಳೆದ ಮೂರು ವರ್ಷದಿಂದ ಸುರೇಶ್ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ… ಆದರೆ, ಜಯಪ್ರದ ಕೆಲವು ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಒಂದು ವಿಡಿಯೋ ನೋಡಿದ್ದರು, ಆ ವಿಡಿಯೋದಲ್ಲಿರುವುದು ತಮ್ಮ ಪತಿ ಸುರೇಶ್ ಎಂಬುದನ್ನು ಖಚಿತಪಡಿಸಿಕೊಂಡರು. ಅಲ್ಲದೆ,  ಈ ವಿಷಯವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ತಕ್ಷಣ ಎಚ್ಚೆತ್ತ ಪೊಲೀಸರು ಹೊಸೂರಿಗೆ ತೆರಳಿ ಸುರೇಶ್ ನನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕುಟುಂಬದ ತಾಪತ್ರಯಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದ ಸುರೇಶ್ ಅದೇ ಕಾರಣಕ್ಕೆ ಕೃಷ್ಣಗಿರಿ ತೊರೆದು ಹೊಸೂರ್ ಜಿಲ್ಲೆಯಲ್ಲಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಲಿಂಗಪರಿವರ್ತನೆಯಾದ ಮಹಿಳೆ ಜೊತೆ ವಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.  ಒಟ್ಟಾರೆಯಾಗಿ ಟಿಕ್ ಟಾಕ್  ಆ್ಯಪ್ ನಿಂದ ಒಂದು ಸಂಸಾರ ಒಂದುಗೂಡಿದೆ.. ಈ ಮನರಂಜನೆಯ ಆ್ಯಪ್ ಎಲ್ಲರಿಗೂ ಕೂಡ ಮತ್ತಷ್ಟು ಇಷ್ಟವಾಗಿದೆ.

Edited By

Manjula M

Reported By

Manjula M

Comments