ಹಿರಿಯ ರಾಜಕಾರಣಿ ಕಮ್ ನಟನಿಗೆ ಹೃದಯಾಘಾತ..!! ಆಸ್ಪತ್ರೆಗೆ ದಾಖಲು

25 Jun 2019 8:54 AM | General
435 Report

ಹಿರಿಯ ರಾಜಕಾರಣಿಯಾದಂತಹ ಹಾಗೂ ಸಿನಿಮಾ ನಟನಾದವರಿಗೆ ಹೃದಯಾಘಾತ ಸಂಭವಿಸಿದೆ.. ಚಿಕಿತ್ಸೆಗಾಗಿ ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಿರಿಯ ರಾಜಕಾರಣಿ ಹಾಗೂ ಹಿರಿಯ ಕಲಾವಿದರಾಗಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃದಯಾಘಾತ ಸಂಭವಿಸಿದೆ.

ಕಳೆದ ಕೆಲವು ವರ್ಷಗಳಿಂದಲೂ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃದಯಾಘಾತ ಆಗುತ್ತಿತ್ತು. ಈಗಾಗಲೆ ಎರಡು ಬಾರಿ ಲಘು ಹೃದಯಾಘಾತ ಸಂಭವಿಸಿತ್ತು ಎಂದು ಹೇಳಲಾಗಿದೆ..ಇದೀಗ ಮತ್ತೆ ಹೃದಯಾಘಾತವಾಗಿದೆ.. ಜೆಪಿ ನಗರದಲ್ಲಿರುವ ಜಯದೇವ ಆಸ್ಪತ್ರೆಗೆ ಮುಖ್ಯಮಂತ್ರಿ ಚಂದ್ರು ಅವರನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುಖ್ಯಮಂತ್ರಿ ಚಂದ್ರು ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದರು.. ಇತ್ತಿಚಿಗೆ ಧಾರವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದರು..ಪೋಷಕಪಾತ್ರಗಳಲ್ಲಿ ಕೂಡ ಅಭಿನಯಿಸಿದ್ದು ಸದ್ಯ ಬೇಗ ಗುಣಮುಖರಾಗಿ ಬರಲಿ ಎನ್ನುವುದು ಎಲ್ಲರ ಆಶಯ..

Edited By

Manjula M

Reported By

Manjula M

Comments