ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಸಿಕ್ತು ಗುಡ್ ನ್ಯೂಸ್..!!

20 Jun 2019 10:05 AM | General
1113 Report

ರಾಜ್ಯ ಸರ್ಕಾರದಲ್ಲಿ ಕುಮಾರಸ್ವಾಮಿ ಯವರು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.. ಇದೀಗ ಪೊಲೀಸರ ಸಂಬಳ ಏರಿಕೆಗೆ ಸಂಬಂಧಪಟ್ಟಂತೆ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಂಬಳ ಹೆಚ್ಚಾದರೆ ಪೊಲೀಸರಿಗೆ ಬಂಪರ್ ಕೊಡುಗೆ ಸಿಕ್ಕಿದಂತೆ ಆಗಿದೆ.

ತುಂಬಾ ದಿನಗಳಿಂದ ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ಔರಾದ್ಕರ್‌ ಅವರ ವರದಿಯನ್ನು ಜಾರಿಗೆ ತರುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದ್ದರು.  ಈ ಹಿಂದೆ ಇದ್ದ ಸರ್ಕಾರವು ಪೊಲೀಸರಿಗೆ ಇದರ ಬಗ್ಗೆ ಹೇಳುತ್ತಾ ಬಂದಿತ್ತು. ಆಧರೆ ಈ ಬಗ್ಗೆ ಯಾವುದೇ ಕಾರ್ಯವನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ.. ಆದರೆ ಇದೀಗ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರು ಪೊಲೀಸರ ವೇತನ ಮತ್ತು ಸೌಲಭ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಔರಾದ್ಕರ್ ಸಮಿತಿ ಶಿಫಾರಸು ಜಾರಿಗೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರ ನಡುವೆ ಪೊಲೀಸರ ಕಷ್ಟ ಪರಿಹಾರ ಭತ್ಯೆಯನ್ನಾಗಿ ಮೊದಲು ಸಾವಿರ ರೂಪಾಯಿ ನೀಡಲಾಗಿತ್ತು. ಸದ್ಯ ಇದನ್ನು 1 ರಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇನ್ನು ಮುಂದೆ 2000 ರೂ. ಪೊಲೀಸರ ಕಷ್ಟ ಪರಿಹಾರ ಭತ್ಯೆ ನೀಡಲಾಗುವುದು. ಮುಂದಿನ ಜುಲೈ 1ರಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಬಂಪರ್ ಆಫರ್ ಸಿಕ್ಕಿದಂತೆ ಆಗಿದೆ.  

 

Edited By

Manjula M

Reported By

Manjula M

Comments